ಬೆಂಗಳೂರು: ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ಅವರ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯದ ಸಿಎಂ ಯಾರು ಎಂಬ ಕುತೂಹಲ ಎಲ್ಲಡೆ ಮನೆ ಮಾಡಿದೆ. ಹೀಗಾಗಿ ಕೆಲ ಹೊತ್ತಲ್ಲೇ ಕರ್ನಾಟಕದ ಹೊಸ ಸಿಎಂ ಫೈನಲ್ ಆಗಲಿದ್ದು,
ಇಂದೇ ನೂತನ ಸಿಎಂ ಹೆಸರು ಡಿಸೈಡ್ ಆಗಲಿದೆ. ಹೊಸ ಸಿಎಂ ಹೆಸರು. ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ನೇತೃತ್ವದಲ್ಲಿ ನಡಯಲಿರುವ ಬಿಜೆಪಿ ಸಂಸದೀಯ ಮಂಡಳಿಯ ಸಭೆಯಲ್ಲಿ ಬಿಎಸ್ವೈ ಉತ್ತರಾಧಿಕಾರಿ ಯಾರೆಂದು ತೀರ್ಮಾನ ಆಗಲಿದೆ. ಸಂಸದೀಯ ಮಂಡಳಿ ಸಭೆ ನಂತರ ಇಂದು ಸಂಜೆಯ ಹೊತ್ತಿಗೆ ಬೆಂಗಳೂರಿಗೆ ವೀಕ್ಷಕರು ಆಗಮಿಸಲಿದ್ದಾರೆ.ವೀಕ್ಷಕರು ಆಗಮಿಸಿದ ನಂತರ ಯಾರು ಸಿಎಂ ಎಂಬುದು ಬಹುತೇಕ ಖಚಿತವಾಗಲಿದೆ.