ಕೂಗು ನಿಮ್ಮದು ಧ್ವನಿ ನಮ್ಮದು

ನಟಿ ಮೇಘನಾ ರಾಜ್ ಮನೆಯಲ್ಲಿ ಕ್ರಿಸ್‍ಮಸ್‍ಗೆ ಭರ್ಜರಿ ತಯಾರಿ, ಕಲರ್ ಫುಲ್ ಲೈಟಿಂಗ್ಸ್ ನೋಡಿ ರಾಯನ್ ಪುಲ್ ಖುಷ್

ಬೆಂಗಳೂರು: ಕ್ರಿಸ್‍ಮಸ್ ಹಬ್ಬಕ್ಕೆ ಈ ಬಾರಿ ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮನೆಯಲ್ಲಿ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಸಿಂಗಾರಗೊಂಡಿರುವ ಮನೆಯಲ್ಲಿ ಮೇಘನಾ ರಾಜ್ ಅವರು ತಮ್ಮ ಪ್ರೀತಿಯ ಮಗನೊಂದಿಗೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ಸಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಹಿಂದೂ ಆಗಿದ್ದು, ಅವರ ತಾಯಿ ಪ್ರಮೀಳಾ ಜೋಷಾಯಿ ಕ್ರಿಶ್ಚಿಯನ್ ಎಂಬುವುದು ಎಲ್ಲರಿಗೂ ಗೊತ್ತಿದೆ.

ಹಾಗಾಗಿ ಮೇಘನಾ ರಾಜ್ ಮನೆಯಲ್ಲಿ ಯಾವುದೇ ಹಿಂದೂ ಮತ್ತು ಕ್ರಿಶ್ಚಿಯನ್ ಹಬ್ಬಗಳು ಬಂದಾಗ ೨ ಹಬ್ಬವನ್ನು ಸಮನಾಗಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಸದ್ಯ ಕ್ರಿಸ್‍ಮಸ್ ಹಬ್ಬಕ್ಕೆ ಇನ್ನೇನು ನಾಲ್ಕು ದಿನಗಳಷ್ಟೇ ಬಾಕಿ ಇದ್ದು, ಈ ಬಾರಿ ಹಬ್ಬಕ್ಕೆ ನಟಿ ಮೇಘನಾ ರಾಜ್ ಮನೆಯನ್ನು ಸಖತ್ ಕಲರ್ ಫುಲ್ ಆಗಿ ಅಲಂಕರಿಸಿದ್ದಾರೆ. ಈ ಫೋಟೋವನ್ನು ಮೇಘನಾ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ಫೋಟೋದಲ್ಲಿ ಲೈಟ್ ಮತ್ತು ಸ್ಟಾರ್ಸ್ ಗಳಿಂದ ಅಲಂಕಾರಗೊಳಿಸಲಾಗಿರುವ ಮನೆಯ ಮಧ್ಯ ಭಾಗದಲ್ಲಿ ಮೇಘನಾ ರಾಜ್ ಅವರು ಮಗ ರಾಯನ್‍ ರಾಜ್ ಎತ್ತಿಕೊಂಡಿದ್ದಾರೆ. ಫೋಟೋದಲ್ಲಿ ರಾಯನ್ ಮಂಕಿ ಕ್ಯಾಪ್ ಧರಿಸಿ ಕಲರ್ ಫುಲ್ ಆಗಿರುವ ಲೈಟಿಂಗ್ಸಗಳನ್ನೆ ಅಚ್ಚರಿಯಿಂದ ನೋಡುತ್ತಿರುವುದನ್ನು ನೋಡಬಹುದಾಗಿದೆ. ಈ ಫೋಟೋ ಜೊತೆಗೆ ಲವ್, ಲೈಫ್ ಮತ್ತು ಅದ್ಭುತವಾದ ಕ್ರಿಸ್‍ಮಸ್ ತಿಂಗಳು ಎಂದು ಕ್ಯಾಪ್ಷನ್‍ನಲ್ಲಿ ನಟಿ ಮೇಘನಾ ಬರೆದುಕೊಂಡಿದ್ದಾರೆ.

ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಹಿಂದೂ ಹಾಗೂ ಕ್ರಿಶ್ಚಿಯನ್ ೨ ಸಂಪ್ರದಾಯದಂತೆ ಮದುವೆಯಾಗಿದ್ರು. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಈ ದಂಪತಿಯ ಪ್ರೀತಿಯ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರ ನಾಮಕರಣ ಮಾಡಲಾಗಿತ್ತು. ಅಲ್ಲದೇ ರಾಯನ್ ಎಂಬ ಹೆಸರು ಎಲ್ಲ ಧರ್ಮಕ್ಕೂ ಸೇರಿದೆ. ಬೇರೆ ಬೇರೆ ವರ್ಷನ್, ಬೇರೆ ಬೇರೆ ರೀತಿಯಲ್ಲಿ ಉಚ್ಛಾರಣೆ ಇರಬಹುದು, ಆದ್ರೆ ಅರ್ಥ ಒಂದೇ. ರಾಯನ್ ಸರ್ಜಾ ಎಂದ್ರೆ ಯುವರಾಜ್ ಎಂಬ ಅರ್ಥವಿದೆ ಎಂದು ಮೇಘನಾ ರಾಜ್ ಸ್ಪಷ್ಟಪಡಿಸಿದ್ದಾರೆ.

error: Content is protected !!