ಕೂಗು ನಿಮ್ಮದು ಧ್ವನಿ ನಮ್ಮದು

ಸುಳೇಬಾವಿ ಪ್ರಿಮಿಯರ್ ಲೀಗ್ (SPL) ಕ್ರಿಕೆಟ್ ಪಂದ್ಯಾವಳಿಗಳಿಗೆ  ಚಾಲನೆ

ಬೆಳಗಾವಿ: ಪ್ರತಿ ಕ್ರೀಡೆಯಲ್ಲೂ ಕ್ರೀಡಾಪಟುಗಳು ಕ್ರೀಡಾ ಪ್ರೇಮ ಮೆರೆಯುವ ಮೂಲಕ ಭಾಗವಹಿಸುವುದು ಅತ್ಯವಶ್ಯಕ. ಸೋಲು- ಗೆಲುವಿಗಿಂತ ಮುಖ್ಯವಾದುದು ಕ್ರೀಡಾ ಮನೋಭಾವ ಎಂದು  ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಸುಳೇಬಾವಿ ಗ್ರಾಮದಲ್ಲಿ ಹರ್ಷಾ ಶುಗರ್ಸ್ ವತಿಯಿಂದ ಆಯೋಜಿಸಲಾದ ಸುಳೇಬಾವಿ ಪ್ರಿಮಿಯರ್ ಲೀಗ್ (SPL) ಕ್ರಿಕೆಟ್ ಪಂದ್ಯಾವಳಿಗಳಿಗೆ  ಚಾಲನೆ ನೀಡಿ ಮಾತನಾಡಿದರು.

“ನಮ್ಮೆಲ್ಲರ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ. ಆರೋಗ್ಯವಂತರಾಗಿರಲು ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಬೇಕು. ಮಕ್ಕಳಿಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಸಾಧನೆಗೆ ಪೂರಕ ಸೌಲಭ್ಯ ಒದಗಿಸಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಹೇಶ ಸುಗ್ನೆಣ್ಣವರ, ನಿಲೇಶ್ ಚಂದಗಡ್ಕರ್, ಇಸ್ಮಾಯಿಲ್ ತಿಗಡಿ, ಬಸನಗೌಡ ಪಾಟೀಲ, ದತ್ತಾ ಬಂಡಿಗಿನಿ, ಚಂಬಣ್ಣ ಅಮೋಜಿ, ಮುಷ್ತಾಕ್ ತಿಗಡಿ ಹಾಗೂ ಕ್ರಿಕೆಟ್ ಪ್ರಿಯರು ಉಪಸ್ಥಿತರಿದ್ದರು.

error: Content is protected !!