ಕೂಗು ನಿಮ್ಮದು ಧ್ವನಿ ನಮ್ಮದು

ಕೊನೆಗೂಸಿಕ್ತು ಕೋವಿಡ್ ಡೆತ್ ಸರ್ಟಿಫಿಕೇಟ್

ಚಾಮರಾಜನಗರ: ಆಕ್ಸಿಜನ್ ದುರಂತದಲ್ಲಿ ಮಡಿದವರಿಗೆ ಡೆತ್ ಸರ್ಟಿಫಿಕೇಟ್ ನೀಡದೇ ಸತಾಯಿಸುತ್ತಿದ್ದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ವೈದ್ಯರು ಘಟನೆ ನಡೆದು ಎರಡು ತಿಂಗಳ ಬಳಿಕ ಆಕ್ಸಿಜನ್ ದುರಂತದಲ್ಲಿ ಮೃತ ಪಟ್ಟ ವ್ಯಕ್ತಿಗಳಿಗೆ ಡೆತ್ ಸರ್ಟಿಫಿಕೇಟ್ ಕೊಟ್ಟಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮುಡಿಗುಂಡ ಗ್ರಾಮ ಜೈ ಶಂಕರ್ ರವರು ಮೇ 2 ರ ರಾತ್ರಿ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ವ್ಯಕ್ತಿಗಳಿಗೆ ಎರಡು ತಿಂಗಳ ಕಾಲ ಡೆತ್ ಸರ್ಟಿಫಿಕೇಟ್ ಕೊಡದೆ ಸತಾಯಿಸುತ್ತಿದ್ದ ಚಾಮರಾಜನಗರ ಜಿಲ್ಲಾಸ್ಪತ್ರೆಯ ವೈದ್ಯರು ಕೊನೆಗೂ ಪ್ರತಿಭಟನೆ ಹಾಗೂ ಒತ್ತಡಕ್ಕೆ ಮಣಿದು ಕೋವಿಡ್ ಡೆತ್ ಸರ್ಟಿಫಿಕೇಟ್ ಕೊಟ್ಟಿದೆ.

ಮುಡಿಗುಂಡ ನಿವಾಸಿ ಜೈ ಶಂಕರ್ ರವರ ಡೆತ್ ಸರ್ಟಿಫಿಕೇಟ್ ಕೊಡಿಸುವಲ್ಲಿ ಎಸ್ ಡಿ ಪಿ ಐ ಪ್ರಮುಖ ಪಾತ್ರ ವಹಿಸಿತ್ತು. ಹೋರಾಟಗಾರರ ಪ್ರತಿಭಟನೆಗೆ ಮತ್ತು ಕೆಪಿಸಿಸಿ ರಾಜ್ಯಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ಹೇಳಿಕೆಗಳಿಂದ ವಿಚಲಿತಗೊಂಡ ರಾಜ್ಯ ಸರ್ಕಾರವು ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೇ 2 ರಾತ್ರಿ ಮೃತರಾದ ಕೋವಿಡ್ ಸೋಂಕಿತರ ಡೆತ್ ಸರ್ಟಿಫಿಕೇಟ್ ಕೊಡಲು ಸೂಚನೆ ನೀಡಿದ್ದರಿಂದ ದುರಂತದಲ್ಲಿ ಮಡಿದವರಿಗೆ ಡೆಟ್ ಸರ್ಟಿಫಿಕೇಟ್ ದೊಯುತ್ತಿದೆ.

ಡೆತ್ ಸರ್ಟಿಫಿಕೇಟ್ ಇಲ್ಲದೆ ನ್ಯಾಯಕ್ಕಾಗಿ ಹೋರಾಟ ನಡೆಸಲು ತೊಂದರೆಯಾಗುವ ಹಿನ್ನಲೆಯಲ್ಲಿ ಕಾಂಗ್ರೇಸ್ ಮತ್ತು ಎಸ್ ಡಿ ಪಿ ಐ ಪ್ರಬಲವಾಗಿ ಹೋರಾಟ ನಡೆಸಿ ಮೃತರ ಕೋವಿಡ್ ಡೆತ್ ಸರ್ಟಿಫಿಕೇಟ್ ಕೊಡಿಸುವಲ್ಲಿ ಯಶಸ್ವಿಯಾದರು.

error: Content is protected !!