ಕೂಗು ನಿಮ್ಮದು ಧ್ವನಿ ನಮ್ಮದು

ನಮ್ಮ ರಕ್ಷಣೆ ನೀವು ಮಾಡುತ್ತೀರಾ? ಇಲ್ಲ ನಾವೇ ಮಾಡಿಕೊಬೇಕಾ? ಸರ್ಕಾರಕ್ಕೆ ಸೂಲಿಬೆಲೆ ಪ್ರಶ್ನೆ

ಶಿವಮೊಗ್ಗ: ನಮ್ಮ ರಕ್ಷಣೆ ನೀವು ಮಾಡುತ್ತೀರಾ ಇಲ್ಲ ನಾವೇ ಮಾಡಿಕೊಳ್ಳಬೇಕಾ ಎಂದು ಚಕ್ರವರ್ತಿ ಸೂಲಿಬೆಲೆ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಇವತ್ತು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೂಲಿಬೆಲೆ ಅವರು, ಹಿಜಾಬ್ ವಿರುದ್ಧ ಹರ್ಷ ಗಲಾಟೆ ಮಾಡುತ್ತಿದ್ದರಿಂದ ಕೊಂದಿರುವುದಾಗಿ ಹೇಳಲಾಗುತ್ತಿದೆ. ಆದ್ರೆ ಇದರ ಹಿಂದಿನ ಸತ್ಯವನ್ನು ಬಯಲಿಗೆ ಎಳಿಬೇಕು. ಆರೋಪಿಗಳಿಗೆ ಸರಿಯಾದ ಶಿಕ್ಷೆ ನೀಡಲಿಲ್ಲ ಅಂದರೆ ಮುಂದೆ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಇಂತಹ ಘಟನೆಗಳನ್ನು ತಡೆಯಬೇಕು ಎಂಬುವುದು ಸರ್ಕಾರಕ್ಕೆ ಅರಿವಾಗಬೇಕು.

ಹಿಂದೂಗಳ ಸಮಾಧಿ ಮೇಲೆ ಸರ್ಕಾರ ಕಟ್ಟಿಕೊಂಡವರು ಇನ್ನೂ ಹಿಂದೂಗಳ ಸಮಾಧಿಗೆ ಕಾರಣರಾಗುತ್ತಿದ್ದಾರೆ ಎಂದರೆ ಇದನ್ನು ಎಂದಿಗೂ ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಭಾರತದಲ್ಲಿ ವಾಹಬಿಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. 2% ಇದ್ದದ್ದು, 25% ಆಗಿದೆ ಎಂದು ಮುಸಲ್ಮಾನರೇ ಹೇಳುತ್ತಿದ್ದಾರೆ. ಇದು ಬಹಳ ಅಪಾಯಕಾರಿ ಸಂಗತಿ ಮುಂದೆ ಇದರಿಂದ ಧಂಗೆ ಕಾರಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಗೃಹ ಸಚಿವರ ತವರು ಜಿಲ್ಲೆಯಲ್ಲೇ ಈ ರೀತಿ ಆಗಿರುವುದು ದುರದೃಷ್ಟಕರ. ಹೀಗಾಗಿ ನೀವು ನಮ್ಮನ್ನು ರಕ್ಷಣೆ ಮಾಡುತ್ತೀರಾ ಅಥವಾ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕೋ ಎಂದು ಸೂಲಿಬೆಲೆ ಪ್ರಶ್ನಿಸಿದ್ದಾರೆ. ನಿನ್ನೆ ಹತ್ಯೆಯಾಗಿದೆ. ಇವತ್ತು ಶಾಂತವಾಗಿದೆ ಎಂಬುವುದು ಖುಷಿ ಪಡುವ ವಿಚಾರವೋ, ಬೇಸರದ ವಿಚಾರವೋ ಗೊತ್ತಿಲ್ಲ. ಹರ್ಷನ ಹತ್ಯೆ ಆರು ತಿಂಗಳಾದರೂ ಮರೆಯಾಗುವುದಿಲ್ಲ. ಆತನ ಸಾವಿಗೆ ಪರಿಹಾರ ಕೊಡುತ್ತೇವೆ ಅಂದರೆ ಮಾತ್ರ ಇದನ್ನು ಮುಕ್ತಾಯಗೊಳಿಸಬಹುದು. ಇಲ್ಲವಾದರೆ ಮೂರು,ನಾಲ್ಕು ತಿಂಗಳಿಗೊಮ್ಮೆ ಈ ರೀತಿಯ ಹತ್ಯೆ ಮರುಕಳಿಸುತ್ತಿರುತ್ತದೆ ಎಂದು ಹೇಳಿದ್ರು.

ಹಿಂದೂ ಹೆಸರು ಹೇಳಿಕೊಂಡು ಆಚೆ ಬರುವವರು ಹೆದರಿಕೊಳ್ಳಬೇಕು. ಹಿಂದೂಗಳು ಮನೆಯಲ್ಲಿ ಇರಬೇಕು ಎಂಬುವುದು ಮುಸಲ್ಮಾನರ ಉದ್ದೇಶ. ಅಕ್ಬರ್, ಬಾಬರ್ ಅದೇ ಕಾಲಕ್ಕೆ ನಾವು ಮರಳುತ್ತಿದ್ದೇವೆ ಅಂದರೆ ಏನು ಅರ್ಥ ಈ ವಿಚಾರ ಇನ್ನೂ ವ್ಯಾಪಕವಾಗಬೇಕು. ಸರ್ಕಾರ ಏನೇ ಹೇಳಿದ್ರು ಯಾವುದು ಸಮಾಧಾನ ನೀಡುವುದಿಲ್ಲ. ಈ ಘಟನೆಗೆ ಸೂಕ್ತವಾದ ಪರಿಹಾರ ನೀಡಿದಾಗ ಮಾತ್ರ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಮೂಡುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

error: Content is protected !!