ಬೆಂಗಳೂರು: ಹೈ ಎಂಡ್ ಕಾರುಗಳನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವವರೇ ಎಚ್ಚರ. ಯಾಕಂದ್ರೆ ಎಮರ್ಜೆನ್ಸಿಗೆ ಹಣ ಬೇಕು ಅಂತಾ ಕಾರು ಅಡವಿಟ್ಟು ಹಣ ಪಡೆದ್ರೆ ನಿಮ್ಮ ಕಾರು ಯಾರಿಗೋ ಮಾರಾಟವಾಗಬಹುದು. ನಿಮ್ಮ ಕಾರನ್ನ ನಿಮಗೆ ಗೊತ್ತಿಲ್ಲದೇ ಹಾಗೇ ಮಾರಾಟ ಮಾಡ್ತಾರೆ ಈ ಖದೀಮರು. ಹೈ-ಎಂಡ್ ಕಾರುಗಳನ್ನ ಅಡವಿಟ್ಟುಕೊಂಡು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಮೂರು ಮಂದಿ ಆರೋಪಿಗಳನ್ನ ಬೆಂಗಳೂರಿನ ಪುಲಕೇಶಿ ನಗರ ಪೊಲೀಸರು ಬಂಧಿಸಿದ್ದಾರೆ.
ಒಟ್ಟು 14 ಹೈ ಎಂಡ್ ಕಾರುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತುರ್ತಾಗಿ ಹಣ ಬೇಕಾದಾಗ ಕಾರನ್ನ ಅಡವಿಟ್ಟು ಕೆಲ ಶ್ರೀಮಂತರು ಹಣ ಪಡೆಯುತ್ತಿದ್ದರು. ಇದೀಗ ಆದಿ ಕೇಶವಲು ಮೊಮ್ಮಗ ಗೀತಾವಿಷ್ಣು ಕಾರನ್ನ ಕೂಡ ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಈ ಖದೀಮರು. ಇನ್ನು ಕಾರನ್ನ ಮಾರಾಟ ಮಾಡುವಾಗ ನಂಬರ್ ಪ್ಲೇಟ್ ಹಾಗೂ ಡಾಕ್ಯುಮೆಂಟ್ಸ್ ಚೇಂಜ್ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಸದ್ಯ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಕಳ್ಳನ ಬಂಧನ: ಬೈಕ್ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಸಮಿಪದ ಕುದರಗುಂಡ ಗ್ರಾಮದ ದ್ಯಾವಪ್ಪ ಹಣಮಂತ್ರಾಯ ಹರಿಜನ (ಪೂಜಾರಿ) ಎಂಬಾತನನ್ನು ಬಂಧಿಸಿರುವ ಪೊಲೀಸ್ರು ಆತನಿಂದ 4 ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ತಾಳಿಕೋಟೆಯ ಖಾಸ್ಗತೇಶ್ವರ ಜಾತ್ರಾ ಉತ್ಸವ ಸಮಯದಲ್ಲಿ ತಾಲೂಕಿನ ನೀರಲಗಿ ಗ್ರಾಮದ ಮಲ್ಲಿಕಾರ್ಜುನ ಬಸನಗೌಡ ಬಗಲಿ ಎಂಬವರು ಮಠದ ಹತ್ತಿರ ತಮ್ಮ ಎಚ್.ಎಫ್.ಡಿಲಕ್ಸ್ ಬೈಕ್ ನಿಲ್ಲಿಸಿ ಭಜನೆಯಲ್ಲಿ ಪಾಲ್ಗೊಂಡಿದ್ದಾಗ ಬೈಕ್ ಕಳವಾಗಿದ್ದು ಬೆಳಕಿಗೆ ಬಂದಿತ್ತು. ಇದನ್ನು ಅರಿತ ಬೈಕ್ ಮಾಲೀಕ ಮಲ್ಲಿಕಾರ್ಜುನ ಬಗಲಿ ತಾಳಿಕೋಟೆ ಠಾಣೆಗೆ ದೂರು ಸಲ್ಲಿಸಿದ್ದರು.
ಅಪರಾಧಿ ಪತ್ತೆಗೆ ಪಿಎಸ್ಐ ಆರ್.ಎಸ್.ಭಂಗಿ, ಎಎಸ್ಐ ಅಶೋಕ ನಾಯ್ಕೋಡಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಸದರಿ ತಂಡ ಬೈಕ್ ಕಳ್ಳನನ್ನು ಬಂಧಿಸುವುದರೊಂದಿಗೆ ಆತನ ಬಳಿ ಇದ್ದ ಕಳವು ಮಾಡಿದ್ದ 4 ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಿಂಥಿಣಿ ಮೌನೇಶ್ವರ ಜಾತ್ರೆಯಲ್ಲಿ ಪ್ಯಾಶನ್ ಪ್ರೋ, ಸಿಂದಗಿ ಸಂಗಮ ಬಾರ ಮುಂದೆ ನಿಲ್ಲಿಸಿದ್ದ ಹೊಂಡಾ ಶೈನ್ ಬೈಕ್, ವಿಜಯಪೂರ ಅಂಬೇಡ್ಕರ್ ಕ್ರೀಡಾಂಗಣ ಗೇಟ್ ಮುಂದೆ ನಿಲ್ಲಿಸಿದ ಎಚ್.ಎಫ್.ಡಿಲಕ್ಸ್ ಬೈಕ್ಗಳನ್ನು ನಿಲ್ಲಿಸಿದ್ದಾಗ ಕಳವು ಮಾಡಿರುವದಾಗಿ ಆರೋಪಿ ದ್ಯಾವಪ್ಪ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸ್ರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಎಂ.ಎಲ್.ಪಟ್ಟೇದ, ಶಿವು ಹಾಳಗೋಡಿ, ಇಮಾಂ ಕುರಿ, ಸಂಗು ಚಲವಾದಿ, ಗೀರಿಶ ಚಲವಾದಿ, ಆರ್.ಎಸ್.ವಡೆಯರ, ಎಸ್.ಬಿ.ಬಗಲಿ, ಎಸ್.ವಿ.ಮಠ, ವಿ.ಎಸ್.ಅಜ್ಜಣ್ಣವರ, ಪಾಲ್ಗೊಂಡಿದ್ದರು.