ಕೂಗು ನಿಮ್ಮದು ಧ್ವನಿ ನಮ್ಮದು

ಕಾರಿನಲ್ಲೆ ಕುಳಿತುಕೊಂಡು ಪಿಲ್ಮ್ ನೋಡುವ ಓಪನ್ ಥಿಯೇಟರ್‌ಗೆ ಚಾಲನೆ

ಮುಂಬೈ: ದೇಶದ ಮೊಟ್ಟ ಮೊದಲ ರೂಫ್ ಟಾಪ್ ಡ್ರೈವ್ ಇನ್ ಓಪನ್ ಥಿಯೇಟರ್ ಮುಂಬೈನಲ್ಲಿ ಶುಕ್ರವಾರದಿಂದ ಪ್ರಾರಂಭವಾಗಿದೆ. ದೇಶದ ಮೊದಲ ಓಪನ್ ಥಿಯೇಟರ್ ಆರಂಭವಾಗಿದ್ದು, ಜಿಯೋ ವರ್ಲ್ಡ್ ಡ್ರೈವ್ ಇನ್ ಮಾಲ್‍ನಲ್ಲಿರುವ ಜಿಯೋ ಡ್ರೈವ್ ಇನ್ ಥಿಯೇಟರ್ ಇಂಡಿಯಾದ ದೊಡ್ಡ ಪರದೆ ಹೊಂದಿದ ಥಿಯೇಟರ್‌‌ಗಳಲ್ಲಿ ಒಂದಾಗಿದೆ.

ಕೋವಿಡ್ ಬಳಿಕ ಜಗತ್ತು ಇನ್ನೂ ಹೊಸ ಜೀವನಕ್ಕೆ ಹೊಂದಿಕೊಳ್ಳುತ್ತಿರುವುದರಿಂದ, ಡ್ರೈವ್ ಇನ್ ಥಿಯೇಟರ್ ಅನ್ನು ಚಲನಚಿತ್ರ ಅಭಿಮಾನಿಗಳಿಗೆ ಸುರಕ್ಷಿತವಾದ ಮುಕ್ತ ಸ್ಥಳವಾಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೂರ್ಯವಂಶಿ ಸಿನಿಮಾ ರೂಫ್‍ಟಾಪ್ ಡ್ರೈವ್ ಇನ್ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿರುವ ಮೊದಲ ಚಲನಚಿತ್ರವಾಗಿದೆ. ಸುಮಾರು ೨೯೦ ಕಾರ್ ಪಾರ್ಕ್ ಮಾಡುವ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಜೊತೆಗೆ ಸ್ಥಳಾವಕಾಶ ನೀಡಬಹುದಾದ ಡ್ರೈವ್ ಇನ್ ಥಿಯೇಟರ್, ರಿಲಯನ್ಸ್ ರೀಟೈಲ್ ಸಹಭಾಗಿತ್ವದ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್ ಇದಾಗಿದೆ.

error: Content is protected !!