ಕೂಗು ನಿಮ್ಮದು ಧ್ವನಿ ನಮ್ಮದು

ನಡು ರೋಡಿನಲ್ಲಿ ಕ್ಯಾಬ್ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಯುವತಿ

ಲಕ್ನೋ: ಹೌದು ನಗರದ ಅವಧ್ ಸಿಗ್ನಲ್‌ ನಲ್ಲಿ ರಸ್ತೆಯ ಮಧ್ಯೆ ಯುವತಿಯೊಬ್ಬಳು ಕ್ಯಾಬ್ ಡ್ರೈವರನಿಗೆ ಹಿಗ್ಗಾಮುಗ್ಗ ಹೋಡೆದಿರುವ ವೀಡಿಯೋ ಈಗ ಸಾಮಾಜಿಕ ಜಾಲತಾನದಲ್ಲಿ ಎಲ್ಲೆಡೆ ಇವಾಗ ಸಖತ ವೈರಲ್ ಆಗುತ್ತಿದೆ. ಇನ್ನೂ ಈ ವೀಡಿಯೋವನ್ನು ಮೇಘ್ ಅಪ್‍ಡೇಟ್ಸ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ವೀಡಿಯೋದಲ್ಲಿ ಯುವತಿ ಕ್ಯಾಬ್ ಚಾಲಕನಿಗೆ ಬಿಟ್ಟು ಬಿಡದೆ ಬಾರಿಸಿದ್ದಾಳೆ. ಇನ್ನೂ ಈ ಗಲಾಟೆಯ ನಡುವೆ ಕ್ಯಾಬ್ ಚಾಲಕನನ್ನು ರಕ್ಷಿಸಲು ಬಂದ ವ್ಯಕ್ತಿಯು ಸಹ ಯುವತಿಯಿಂದ ಹಲ್ಲೆಗೊಳಗಾಗಿದ್ದಾರೆ.

ಇನ್ನೂ ಯುವತಿಗೆ ಕಾರು ಗುದ್ದಿರುವುದಾಗಿ ಹೇಳುತ್ತಿರುವುದನ್ನು ಕೇಳಬಹುದಾಗಿದೆ
ಈ ವೀಡಿಯೋದಲ್ಲಿ. ಜೊತೆಗೆ ಯುವತಿ ಜೀಬ್ರಾ ಕ್ರಾಸಿಂಗ್ ಮಧ್ಯೆ ನಿಂತು ಕ್ಯಾಬ್ ಡ್ರೈವರನ್ ಕಪಾಳಕ್ಕೆ ಹೋಡಿದ್ದಿದ್ದಾಳೆ. ಇನ್ನೂ ಇದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಫಿಕ್ ಜಾಮ್ ಆಗಿದೆ. ಜೊತೆಗೆ ಈ ವಿಚಾರವಾಗಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯವರು ಮಧ್ಯೆ ಪ್ರವೇಶಿಸಿ ಜಗಳವನ್ನು ತಪ್ಪಿಸಲು ಪ್ರಯತ್ನಿಸುತ್ತಿರುತ್ತಾರೆ. ಆದ್ರು ಈ ಮಹಿಳೆಯು ಬಿಟ್ಟು ಬಿಡದೆ ಚಾಲಕನನ್ನು ಎಳೆದಾಡಿಕೊಂಡು ಹೊಡೆಯುತ್ತಲೇ ಇದ್ದಳು. ಇನ್ನೂ ಇದೆ ವೇಳೆಗೆ ಚಾಲಕ ಮಹಿಳಾ ಪೊಲೀಸ್ ಠಾಣೆಗೆ ಕರೆ ಮಾಡುವಂತೆ ಸ್ಥಳೀಯರಿಗೆ ಹೇಳುತ್ತಿರುವುದನ್ನು ವೀಡಿಯೋದಲ್ಲಿ ನಾವು ನೀವುಗಳು ಕಾಣಬಹುದಾಗಿದೆ.

error: Content is protected !!