ಕೂಗು ನಿಮ್ಮದು ಧ್ವನಿ ನಮ್ಮದು

ಕಾಂಗ್ರೆಸ್ಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ರೆ ಸಿ.ಎಂ. ಇಬ್ರಾಹಿಂ ಅವರನ್ನು ಸಿಎಂ ಮಾಡಲಿ! ಬಿಜೆಪಿ ಮುಖಂಡ ಸಿ.ಟಿ.ರವಿ

ದೆಹಲಿ: ರಾಜ್ಯ ಕಾಂಗ್ರೆಸ್ ನಲ್ಲಿ ಖುರ್ಚಿ ಕಚ್ಚಾಟ ದಿನದಿಂದ ದಿನಕ್ಕೆ ಬಾರಿ ಸದ್ದು ಮಾಡುತ್ತಿದೆ, ಇತ್ತ ಕಾಂಗ್ರೆಸ್ ಕೆಲ ನಾಯಕರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿಕೆ ನೀಡಿದರೆ,ಇನ್ನು ಕೆಲವರು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸಿ.ಟಿ.ರವಿ ಅವರು ಕಾಂಗ್ರೆಸ್‌ನವರು ಬಹುಮತ ಇಲ್ಲದಿದ್ರೂ ಕನಸು ಕಾಣ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಹಲವರು ಸಿಎಂ ಆಗಲು ಕನಸು ಕಾಣುತ್ತಿದ್ದಾರೆ. ಹನುಮಂತನ ಬಾಲದ ರೀತಿಯಲ್ಲಿ ಪಟ್ಟಿ ಬೆಳೆಯುತ್ತಿದೆ.

ಕಾಂಗ್ರೆಸ್ MLC ಸಿ.ಎಂ.ಇಬ್ರಾಹಿಂ ಹೇಳಿಕೆ ಗಮನಿಸಿದ್ದೇನೆ. ಇಬ್ರಾಹಿಂ ಸಿಎಂ ಆಗಬೇಕು, ಹೇಳಿಕೆಯಲ್ಲಿ ನ್ಯಾಯ ಇದೆ. ನನ್ನ ಬೆಂಬಲ ಸಿ.ಎಂ.ಇಬ್ರಾಹಿಂಗೆ ಇದೆ ಎಂದ ಸಿ.ಟಿ.ರವಿ. ಅವರ ಹೆಸರಿನಲ್ಲೇ ಸಿ.ಎಂ. ಇದೆ, ಅದನ್ನು ಅಧಿಕೃತ ಮಾಡಿ. ಕಾಂಗ್ರೆಸ್ಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ರೆ ಮಾಡಲಿ. ಅಲ್ಪಸಂಖ್ಯಾತರ ಮೊಣಕೈಗೆ ತುಪ್ಪ ಸವರಬೇಡಿ ಎಂದ ರವಿ. ದಲಿತರಿಗೆ ಮೋಸ ಮಾಡಿದ್ರಿ, ಅಲ್ಪಸಂಖ್ಯಾತರಿಗೆ ಮಾಡಬೇಡಿ. ಜಮೀರ್, ತನ್ವೀರ್, ಇಬ್ರಾಹಿಂ ಯಾರನ್ನಾದ್ರೂ ಮಾಡಿ. ಇಬ್ರಾಹಿಂ ಅವರನ್ನು ಸಿಎಂ ಮಾಡಲು ನನ್ನ ಬೆಂಬಲ ಇದೆ ಎಂದು ದೆಹಲಿಯಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.

error: Content is protected !!