ಕೂಗು ನಿಮ್ಮದು ಧ್ವನಿ ನಮ್ಮದು

ಮಧ್ಯರಾತ್ರಿ ಮಂಡ್ಯದಲ್ಲಿ ಪುಂಡರ ಅಟ್ಟಹಾಸದಿಂದ ಶಾಸಕ C.S.ಪುಟ್ಟರಾಜು ಮನೆ ಮೇಲೆ ಕಲ್ಲು ತೂರಾಟ

ಮಂಡ್ಯ: ಶಾಸಕ C.S ಪುಟ್ಟರಾಜು ಮನೆ ಸೇರಿದಂತೆ ಕೆಲವು ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಪಾಂಡವಪುರ ಪಟ್ಟಣದಲ್ಲಿ ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಮೇಲುಕೋಟೆ ಕ್ಷೇತ್ರದ ಶಾಸಕ C.S ಪುಟ್ಟರಾಜು ಮನೆ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದು ವಿಕೃತಿ ಮೆರೆದಿದ್ದಾರೆ.

ಕಿಡಿಗೇಡಿಗಳ ಕಲ್ಲು ತೂರಾಟದಿಂದ ಶಾಸಕರ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಅಲ್ಲದೆ ಪುಂಡರು 3 ಕಾರು, 1 ಖಾಸಗಿ ಬಸ್ ಮತ್ತು ಹೋಂಡಾ ಶೋರೂಂ ಮೇಲು ಕಲ್ಲು ಎಸೆದಿದ್ದಾರೆ.
3 ಕಾರುಗಳ ಗಾಜುಗಳಿಗೆ ಡ್ಯಾಮೇಜ್ ಆಗಿದೆ. 1 ಕಾರಿಗೆ ಭಾರೀ ಗಾತ್ರದ ಕಲ್ಲು ಎಸೆದಿದ್ದಾರೆ. ಕಿಡಿಗೇಡಿಗಳ ಕೃತ್ಯ CCTVಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಪಾಂಡವಪುರ ಪಟ್ಟಣ ಠಾಣೆಯಲ್ಲಿ ಈ ಪ್ರಕರಣವು ದಾಖಲಾಗಿದೆ.

error: Content is protected !!