ಕೂಗು ನಿಮ್ಮದು ಧ್ವನಿ ನಮ್ಮದು

ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸಿಸಿ ಪಾಟೀಲ್!

ಗದಗ : ಮಾತನಾಡುವ ಬರದಲ್ಲಿ ಸ್ಲಿಪ್ ಆಫ್ ಟಂಗ್ ಆಗುತ್ತೆ.. ಆದ್ರೆ ಅದಕ್ಕೊಂದು ಇತಿ ಮಿತಿ ಇರ್ಬೇಕು. ಇವತ್ತು ಸರ್ಕಾರಿ ನೌಕರಿಯಲ್ಲಿರುವ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತ್ನಾಡೋದು ಎಷ್ಟು ಸರಿ ಎಂದು ಸಚಿವ ಸಿಸಿ ಪಾಟೀಲ್ ಅವರು ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಗ್ಗೆ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸಿಸಿ ಪಾಟೀಲ್, ಸಾವಿರಾರು ಜನ ತಾಯಂದಿರು, ಸಹೋದರಿಯರು ಐಎಎಸ್, ಕೆಎಎಸ್ ಇದ್ದಾರೆ.. ಪ್ರಿಯಾಂಕ ಖರ್ಗೆಯವರದ್ದು ನಾಲಿಗೆಯೋ ಏನೋ.. ಮಾತಿಗೆ ಇತಿ ಮಿತಿ ಇರಬೇಕು. ಕ್ಯಾಮರಾ ಇದೆ ಅಂತಾ ಏನ್ ಬೇಕಾದ್ದು ಮಾತ್ನಾಡೋದಾ.

ಯಾವುದೋ ಒಂದು ಘಟನೆ ಆಗಿದ್ರೆ ನಾರಿ ಕುಲಕ್ಕೆ ಅವಮಾನ ಮಾಡೋದಾ. ಇವರೇನು ಸುಸೂತ್ರ ಇದ್ದಾರಾ. ಕಾಂಗ್ರೆಸ್ ಮೂಲ ಪಿತಾಮಹರ ಫೊಟೋ ಎಂಥೆವು ಇದ್ದಾವು.. ವಾಟ್ಸಾಪ್ ಫೇಸ್ ಬುಕ್ ನಲ್ಲಿ ಹರಿದಾಡ್ತಿದ್ದಾವೆ. ತೆಗೆದು ನೋಡಿದ್ದಾರಾ ಖರ್ಗೆಯವರು. ತಮ್ಮ ಬಳುವಳಿ ಮಂದಿ ಮೇಲೆ ಮಾತ್ನಾಡ್ತಿದ್ದಾರೆ. ಸ್ವಾತಂತ್ರ್ಯ ಉತ್ಸವ ಆಚರಿಸುವ ಸಂದರ್ಭದಲ್ಲಿ ಇಂಥದ್ದನ್ನ ಮಾತ್ನಾಡಿದ್ದಾರೆ.. ಸ್ವಾತಂತ್ರ್ಯಕ್ಕಾಗಿ ತಾಣಿ ಚೆನ್ನಮ್ಮ, ಅಬ್ಬಕ್ಕ ಹೋರಾಡಿದ್ದಾರೆ. ಇಂತಹ ನಾರಿ ಕುಲಕ್ಕೆ ನಾರಿ ಕುಲಕ್ಕೆ ಅವಮಾನ ಮಾಡಿದ್ದಾರೆ. ಬೇಷರತ್ ಕ್ಷಮೆ ಕೇಳಬೇಕು, ಧೈರ್ಯ ಇದ್ದವನು ಕ್ಷಮೆ ಕೇಳ್ತಾನೆ ಎಂದು ಸವಾಲ್ ಹಾಕಿದ್ದಾರೆ.

error: Content is protected !!