ಕೂಗು ನಿಮ್ಮದು ಧ್ವನಿ ನಮ್ಮದು

ಬಸ್ ನೋಡದ ಹಳ್ಳಿಗಳಿಗೆ ಬಸ್ನಲ್ಲಿಯೇ ಹೊರಟ ಶಾಸಕ ಪ್ರದೀಪ್; ನೂತನ ಶಾಸಕನ ಸ್ಟೈಲ್ಗೆ ಮನಸೋತ ಜನ!

ಚಿಕ್ಕಬಳ್ಳಾಪುರ: ನೂತನ ಶಾಸಕ ಪ್ರದೀಪ್ ಈಶ್ವರ್ ನಗರದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ತಮ್ಮ ನೂತನ ಕಛೇರಿ ಉದ್ಘಾಟನೆ ಮಾಡಿದ್ರು, ಶಾಸಕ ಪ್ರದೀಪ್ ಅವರ ನೂತನ ಕಛೇರಿಗೆ ನುಗ್ಗಿದ ಕಾರ್ಯಕರ್ತರು ಶುಭಾಶಯಗಳನ್ನು ಕೋರುವ ನೆಪದಲ್ಲಿ ಮುಗಿಬಿದ್ದಿದ್ದು, ಕಾರ್ಯಕರ್ತರ ನಡುವೆ ನೂಕುನುಗ್ಗಲು ಏರ್ಟಪಿಟ್ಟಿತ್ತು. ಇದ್ರಿಂದ ಕೆರಳಿದ ಶಾಸಕ ಪ್ರದೀಪ್ ಈಶ್ವರ್ಗೆ ತಾಳ್ಮೆಯ ಕಟ್ಟೆ ಒಡೆದು ಕಾರ್ಯಕರ್ತರಿಗೆ ಇಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ನಾನು ಹಳೆ ಶಾಸಕರ ಥರಹ ಅಲ್ಲ, ಮಾಜಿ ಶಾಸಕರು ಈ ರೀತಿ ಮಾಡಿ ನಿಮನ್ನೆಲ್ಲ ಕೆಡಸಿ ಇಟ್ಟಿದ್ದಾರೆ. ಮಾಜಿ ಶಾಸಕರು ಮಾಡಿದ ತಪ್ಪುಗಳನ್ನು ನಾನು ಮಾಡುವುದಿಲ್ಲ. ಶಿಸ್ತು ಪಾಲನೆ ಮಾಡದೇ ಹೋದರೆ ನನ್ನ ಸ್ವಂತ ಅಣ್ಣ ತಮ್ಮ ಅಂತನೂ ನೋಡಲ್ಲ ಬೆಂಡೆತ್ತಿ ಬ್ರೇಕ್ ಹಾಕ್ತಿನಿ ಎಂದು ಶಾಸಕ ಪ್ರದೀಪ್ ಈಶ್ವರ್ ಕಾರ್ಯಕರ್ತರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಸ್ವಾತಂತ್ರ್ಯ ಪೂರ್ವದಿಂದಲೂ ಬಸ್ ಸೌಕರ್ಯ ಇಲ್ಲದ ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇನ್ನು ಕಾಂಗ್ರೆಸ್ ತನ್ನ ಗ್ಯಾರೆಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ವಿತರಿಸುವ ಬಗ್ಗೆ ಚಿಂತನೆ ನಡೆಸುತಿದ್ರೆ, ಇತ್ತ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತನ್ನ ಕ್ಷೇತ್ರದ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಸ್ವತಂತ್ರ್ಯ ಪೂರ್ವದಿಂದಲೂ ಬಸ್ ಸೌಕರ್ಯ ಇಲ್ಲದ ಹಳ್ಳಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸ್ವತಃ ಶಾಸಕ ಪ್ರದೀಪ್ ಈಶ್ವರ್ ಸರ್ಕಾರಿ ಬಸ್ನಲ್ಲಿ ಪ್ರಯಾಣ ಮಾಡುವ ಮೂಲಕ ಬುಡಗನೂರು, ಹಿರೇನಹಳ್ಳಿ, ಮಾರ್ಗಾನಹಳ್ಳಿ, ಪಾತೂರು, ಚೀಮನಹಳ್ಳಿ, ಬಡಿಗನಾನಿಪಲ್ಲಿ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿದರು.

ಒಟ್ಟಾರೆ ಸಿಎಂ ಸಿದ್ದು ಸರ್ಕಾರ ತನ್ನ ಗ್ಯಾರಂಟಿಗಳಲ್ಲಿ ಒಂದಾದ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು ಅನುಷ್ಟಾನಗೊಳಿಸಲು ಕಾರ್ಯತಂತ್ರ ರೂಪಿಸುತಿದ್ರೆ, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸ್ವಾತಂತ್ರ್ಯ ಪೂರ್ವದಿಂದಲೂ ಸಾರಿಗೆ ಬಸ್ ಮುಖವನ್ನೇ ನೋಡದ ಹಳ್ಳಿಗಳಿಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿ ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

error: Content is protected !!