ಬೆಳಗಾವಿ: ಹೈಕಮಾಂಡ್ ಇಂದ ಸಯಂಕಾಲ ಸಂದೇಶ ಬರಲಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಇನ್ನೂ ಅತಿವೃಷ್ಟಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿರುವ ಬಿ.ಎಸ್.ವೈ ಸುದ್ದಿಗಾರರೊಂದಿಗೆ ಮಾತನಾಡಿ, ಸಾಯಂಕಾಲ ಹೈಕಮಾಂಡ್ ಅವರ ನಿರ್ಧಾರವನ್ನು ತಿಳಿಸುತ್ತಾರೆ. ಮುಂಬರುವ ಮುಖ್ಯಮಂತ್ರಿ ಯಾರಾಗಬೇಕೆಂದು ಆಗ ತಿಳಿಯಲಿದೆ. ಇನ್ನೂ ಈ ಕುರಿತು ಯವುದೇ ಸ್ವಾಮಿಜಿಗಳ ಸಭೆ, ಸಮಾವೇಶ ಮಾಡುವಂತಹ ಅವಶ್ಯಕತೆಯಿಲ್ಲ. ನನಗೆ ನರೇಂದ್ರ ಮೋದಿ, ಅಮಿತ್ ಶಾ ಅವರ ಮೇಲೆ ವಿಶ್ವಾಸವಿದೆ ಎಂದು ಬಿ.ಎಸ್.ವೈ ಹೇಳಿದ್ದಾರೆ. ೨ ವರ್ಷಗಳ ಕೆಲಸ ತೃಪ್ತಿ ತಂದಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಬಿ.ಎಸ್.ವೈ ನಿಮಗೆ ತೃಪ್ತಿ ತಂದಿದ್ರೆ ಸಾಕು ಎಂದು ನಗುತ್ತಾ ಹೇಳಿ ಅಲ್ಲಿಂದ ಬಿ.ಎಸ್ ವೈ ತೆರಳಿದ್ದಾರೆ.
ಇನ್ನೂ ಶಶಿಕಲಾ ಜೊಲ್ಲೆಯವರ ಮೊಟ್ಟೆ ಟೆಂಡರ್ ವಿಚಾರಕ್ಕೆ ಹಣವನ್ನು ಪಡೆದು ಟೆಂಡರ್ ಕೊಟ್ಟಿದ್ದಾರೆ. ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಿ.ಎಸ್.ವೈ, ನಾನು ಕೂಡ ಈ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಈ ವಿಚಾರವಾಗಿ ನಾನು ವಾಸ್ತವ ಸ್ಥಿತಿ ಗತಿಗಳನ್ನು ತಿಳಿದುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಹೆಚ್ಚಾಗಿ ಮಳೆಯಾಗಿದೆ. ಹಾಗಾಗಿ ನದಿಗಳು ತುಂಬಿ ಹರಿಯುತ್ತಿವೆ. ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಹೀಗಾಗಿ ಇವತ್ತು ಕೊಂಚ ಮಟ್ಟಿಗೆ ಮಳೆ ಕಡಿಮೆಯಾಗಿದೆ. ಇದೆ ರೀತಿ ಮಳೆ ಸ್ವಲ್ಪ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೆನೆ. ಎಂದು ಹೇಳಿ ಬಿ.ಎಸ್.ವೈ ಮುಂದೆ ತೆರಳಿದ್ದಾರೆ.