ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬಿಆರ್‌ಟಿಎಸ್ ಚಿಗರಿ ಬಸ್ ಡಿಕ್ಕಿಯಾಗಿ ಪಾದಚಾರಿ ಸಾವಿಗಿಡಾಗಿದ್ದು, ಹುಬ್ಬಳ್ಳಿಯ ವಿದ್ಯಾನಗರದ ಗುರುದತ್ತ ಭವನದ ಬಳಿ ಘಟನೆ ನಡೆದಿದೆ.
ಗಂಗಾಧರ್ ಮುಮ್ಮಿಗಟ್ಟಿ (74) ಮೃತ ಪಾದಚಾರಿಯಾಗಿದ್ದು, ರಸ್ತೆ ದಾಟುತ್ತಿದ್ದಾಗ ಬಿಅರ್‌ಟಿಎಸ್ ಚಿಗರಿ ಬಸ್ ಡಿಕ್ಕಿಯಾಗಿದೆ. ಈ ಕುರಿತು ಹುಬ್ಬಳ್ಳಿಯ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಆರ್‌ಟಿಎಸ್ ಬಸ್ ವ್ಯವಸ್ಥೆ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
ಅತಿ ವೇಗದ ಬಸ್ ಚಾಲನೆಯೇ ಅನಾಹುತಕ್ಕೆ ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದು, ಬಸ್ ಸಂಚಾರ ತಡೆದು ಬಿಆರ್‌ಟಿಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೇಜವಾಬ್ದಾರಿಯುತ ಬಸ್ ಚಾಲನೆಯಿಂದಾಗಿ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಿವೆ ಎಂದು ಆಕ್ರೋಶ ಹೊರಹಾಕಿದ್ರು.