ಕೂಗು ನಿಮ್ಮದು ಧ್ವನಿ ನಮ್ಮದು

ಬಿಜೆಪಿಯ ಮುಸ್ಲಿಂ ವಿರೋಧಿ ಪೋಸ್ಟ್‌ ಡಿಲೀಟ್‌ ಮಾಡಿದ ಟ್ವಿಟ್ಟರ್‌

ಗಾಂಧಿನಗರ: ಮುಸ್ಲಿಮರನ್ನು ಉಗ್ರರೆಂದು ಬಿಂಬಿಸಿ ಅವರನ್ನು ನೇಣಿಗೆ ಹಾಕುತ್ತಿರುವ ಕಾರ್ಟೂನ್‌ವೊಂದನ್ನು ಟ್ವೀಟ್‌ ಮಾಡಿದ್ದ ಗುಜರಾತ್‌ BJP ಘಟಕದ ಪೋಸ್ಟ್‌ ಅನ್ನು ಟ್ವಿಟ್ಟರ್‌ ಡಿಲೀಟ್‌ ಮಾಡಿದೆ. 2008ರಲ್ಲಿ ಅಹಮದಾಬಾದ್‌ನಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮೂವತ್ತೆಂಟು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿತ್ತು. ಆರೋಪಿಗಳು ಇಂಡಿಯನ್‌ ಮುಜಾಹಿದೀನ್‌ ಎಂಬ ಗುಂಪಿನ ಸದಸ್ಯರಾಗಿದ್ದರು.

ಇದನ್ನೇ ಮುಖ್ಯವಾಗಿಸಿಕೊಂಡು ಗುಜರಾತ್‌ BJP ಘಟಕವು ಕಾರ್ಟೂನ್‌ವೊಂದನ್ನು ಪೋಸ್ಟ್‌ ಮಾಡಿತ್ತು. ಕಾರ್ಟೂನ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾಗೂ ಅಹಮದಾಬಾದ್‌ ಸ್ಫೋಟದ ಚಿತ್ರಣವನ್ನು ಬಿಂಬಿಸಲಾಗಿತ್ತು. ಕೆಲವರನ್ನು ನೇಣಿಗೆ ಹಾಕುವ ಚಿತ್ರಣವೂ ಅದರಲ್ಲಿತ್ತು. ಜೊತೆಗೆ ಸತ್ಯಮೇವ ಜಯತೆ. ಭಯೋತ್ಪಾದಕರಿಗೆ ಕರುಣೆ ಇಲ್ಲ ಎಂದು ಬರೆಯಲಾಗಿದ್ದ ಚಿತ್ರವನ್ನು BJP ಪೋಸ್ಟ್‌ ಮಾಡಿತ್ತು.

ದ್ವೇಷಪೂರಿತ ಚಿತ್ರದ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮೈಕ್ರೋ ಬ್ಲಾಗಿಂಗ್‌ ಸೈಟ್‌ನಿಂದ ಟ್ವೀಟ್‌ ಅನ್ನು ತೆಗೆದು ಹಾಕಲಾಗಿದೆ. ಆದರೂ ಕಾರ್ಟೂನ್‌ ಒಳಗೊಂಡ ಹಲವಾರು ಪೋಸ್ಟ್‌ಗಳನ್ನು ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಲಾಗಿದೆ.

error: Content is protected !!