ಕೂಗು ನಿಮ್ಮದು ಧ್ವನಿ ನಮ್ಮದು

K.P ಅರವಿಂದ್ ಬೈಕ್ ಮುಂದೆ ಡಿಯು ಸ್ಟೈಲಿಶ್ ಪೋಸ್

ಬೆಂಗಳೂರು: ಕನ್ನಡ ಬಿಗ್‍ಬಾಸ್ ಸೀಸನ್ ಎಂಟರ ಶೋ ಖ್ಯಾತಿಯ ಅರವಿಂದ್ ಬೈಕ್ ಮುಂದೆ ನಿಂತುಕೊಂಡು ಡಿಯು ಸ್ಟೈಲಿಶ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ. ಬಿಗ್‍ಬಾಸ್ ಸೀಸನ್ ಎಂಟರ ಕ್ಯೂಟ್ ಕಪಲ್ ಎಂದೇ ಫೇಮಸ್ ಆಗಿದ್ದ ಜೋಡಿ ಅಂದರೆ ಅದು ಕೆ.ಪಿ ಅರವಿಂದ್ ಮತ್ತು ದಿವ್ಯಾ ಉರುಡುಗ ದೊಡ್ಮನೆಯಲ್ಲಿ ಎಲ್ಲಿ ನೋಡಿದ್ರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಡಿಯು ಮತ್ತು ಕೆ.ಪಿ ಅರವಿಂದ್ ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದ ಬಳಿಕ ಒಟ್ಟಿಗೆ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ.

ಆದ್ರೆ ಇದೀಗ ಡಿಯು ಮತ್ತು ಕೆ.ಪಿ ಅರವಿಂದ್ ಜೊತೆಯಾಗಿ ಕಾಣಿಸಿಕೊಳ್ಳಲು ಶುರು ಮಾಡಿದ್ದಾರೆ.
ಸದ್ಯ ಇತ್ತೀಚೆಗಷ್ಟೇ ಕೆ.ಪಿ ಅರವಿಂದ್ ಮತ್ತು ಡಿಯು ಒಟ್ಟಿಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ರು. ಇದೆ ವೇಳೆ ಡಿಯು ಅರವಿಂದ್ ಬೈಕ್ ಮುಂದೆ ನಿಂತು ಫೋಟೋಗೆ ಸಖತ್ ಸ್ಟೈಲಿಶ್ ಆಗಿ ಪೋಸ್ ನೀಡಿ ಪೋಟೋ ತೇಗೆಸಿಕೊಂಡಿದ್ದಾರೆ.

ಇನ್ನೂ ಈ ಫೋಟೋವನ್ನು ದಿವ್ಯಾ ಉರುಡುಗ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ನಿಮಗೆ ಸರಿಯಾಗಿ ಕಂಪನಿ ಕೊಡುವವರಿದ್ರೆ, ಪ್ರಯಾಣದ ರಸ್ತೆ ದೂರ ಎನಿಸುವುದಿಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಬಿಗ್‍ಬಾಸ್ ಕಾರ್ಯಕ್ರಮದ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಆ್ಯಕ್ವಿವ್ ಆಗಿರುವ ಈ ಜೋಡಿ ಆಗಾಗ ಅಭಿಮಾನಿಗಳೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

error: Content is protected !!