ಬೆಂಗಳೂರು: ಮಂಜು ಜೊತೆಗಿನ ಫ್ರೆಂಡ್‍ಶಿಪ್‍ಗೆ ಗುಡ್ ಬೈ ಹೇಳಿದ ದಿವ್ಯಾ ಸುರೇಶ್ ಬಿಗ್ ಬಾಸ್ ಮೊದಲ ಇನ್ನಿಂಗ್ಸ್ ನಲ್ಲಿ ತುಂಬಾ ಅನ್ಯೂನ್ಯವಾಗಿದ್ದ ದಿವ್ಯಾ ಸುರೇಶ್ ಮತ್ತು ಮಂಜ ಅವರ ಜೋಡಿ ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ತಮ್ಮ ಫ್ರೆಂಡ್‍ಶಿಪ್‍ಗೆ ಗುಡ್ ಬೈ ಹೇಳಿದ್ದಾರೆ.
ಹೌದು ಬಿಗ್‍ಬಾಸ್ ನೀಡಿದ ತಳ್ಳುಬಂಡಿ ಟಾಸ್ಕ್ ನಲ್ಲಿ ಕಾಲಿಗೆ ಗಾಯ ಮಾಡಿಕೊಂಡ ದಿವ್ಯಾ ಸುರೇಶ್ ಗಾಯಕ್ಕೆ ಔಷಧಿ ಹಚ್ಚಿಕೊಂಡ ಬಳಿಕ ಮಂಜು ಬಳಿ ಬಂದು ನಾನು ಗಾಯಮಾಡಿಕೊಂಡು ಒಳಬಂದಾಗ ನೀನು ಕೂತ ಜಾಗದಿಂದ ಎದ್ದು ಬಂದಿಲ್ಲ ಎಂದು ತಕಾರರು ಎತ್ತಿದ್ದಾರೆ. ಮಂಜ ನೀನು ಫ್ರೆಂಡ್‍ಶಿಪ್‍ಗೆ ಬೆಳೆ ಕೊಡುವವನಾಗಿದ್ದರೆ ಎದ್ದು ಬರುತ್ತಿದ್ದೆ ನೀನು ಬರಲಿಲ್ಲ ಎಂದು ಮಂಜನಿಗೆ ದಿವ್ಯಾ ಹೇಳಿದ್ದಾರೆ. ಆಗ ನಿಧಿ ನಾನು ಮಂಜನಿಗೆ ಎರಡು ಬಾರಿ ಎದ್ದು ಹೋಗು ನೋಡಿ ಸಮಾಧಾನ ಮಾಡಿ ಬಾ ಎಂದಿದ್ದೆ. ಆದರೆ ಮಂಜ ನೀನು ಸುಮ್ಮನಿರಮ್ಮ ಎಂದು ನನಗೆ ಹೇಳಿದ್ದ ಎಂದು ತಿಳಿಸಿದ್ದಾರೆ.
ಇದನ್ನು ಕೇಳಿಸಿಕೊಂಡ ದಿವ್ಯಾ ಥೂ.. ಅಂತ ಉಗಿದು ನಿನಗು ನಿನ್ನ ಫ್ರೆಂಡ್‍ಶಿಪ್‍ಗೂ ಗುಡ್ ಬೈ ಎಂದಿದ್ದಾರೆ. ಇದಕ್ಕೆ ಮಂಜು ನಮಗೆ ಎದೆ ಮೇಲೆ ಒದಿತೀರಿ ಅಂದ ಮೇಲೆ ನಿಮಗೆ ದೇವರು ಸರಿಯಾಗಿ ಶಿಕ್ಷೆ ಕೊಟ್ಟಿದ್ದಾನೆ ಎಂದಿದ್ದಾರೆ. ಈ ಮಾತಿಗೆ ದಿವ್ಯಾ ಕೂತ್ಕೂಳಯ್ಯ ಸುಮ್ಮನೆ ನೊಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಈ ಜೋಡಿಗಳು ಮತ್ತೆ ಜಗಳ ಪ್ರಾರಂಭ ಮಾಡಿಕೊಂಡು ನೋಡುಗರನ್ನು ಮನರಂಜಿಸುತ್ತಿದೆ.