ಕೂಗು ನಿಮ್ಮದು ಧ್ವನಿ ನಮ್ಮದು

2,500 ಕೋಟಿ ರೂಪಾಯಿ ತನಿಖೆಗೆ ಭಾಸ್ಕರ್ ರಾವ್ ಆಗ್ರಹ

ಬೆಂಗಳೂರು: ಸಿಎಂ ಹುದ್ದೆಯನ್ನು ಬಿಜೆಪಿಯವರು ಹಣ ಪಡೆದು ಮಾರಾಟ ಮಾಡುತ್ತಾರೆಂದು ಅವರ ಪಕ್ಷದ ಶಾಸಕರೇ ಬಹಿರಂಗ ಪಡಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಆಮ್ ಆದ್ಮಿ ಪಾರ್ಟಿ ಮುಖಂಡ ಮತ್ತು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಗ್ರಹಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಭಾಸ್ಕರ್ ರಾವ್ ಅವರು, ಪಿಎಸ್‍ಐ ಮತ್ತು ಇತರೆ ಸರ್ಕಾರಿ ಹುದ್ದೆಗಳನ್ನು ಹಣ ಪಡೆದು ಬಿಕರಿ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿತ್ತು.

ಈಗ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್‍ರವರು ಮುಖ್ಯಮಂತ್ರಿ ಹುದ್ದೆಯನ್ನೂ ಹಣಕ್ಕೆ ಮಾರಾಟ ಮಾಡುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. 2,500 ಕೋಟಿ ರೂಪಾಯಿ ಕೊಟ್ಟರೆ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದಿದ್ದಾರೆ. ಅಷ್ಟು ದೊಡ್ಡ ಮೊತ್ತವನ್ನು ಬಿಜೆಪಿಯಿಂದ ಮುಖ್ಯಮಂತ್ರಿ ಆದವರು ಹೇಗೆ ಹೊಂದಿಸಿದ್ದಾರೆ. ಮತ್ತು ಹಣ ಪಡೆದ ಹೈಕಮಾಂಡ್ ಅದರಿಂದ ಏನು ಮಾಡಿದೆ ಎಂಬುದು ಬಯಲಾಗಬೇಕೆಂದು ಭಾಸ್ಕರ್ ರಾವ್ ಹೇಳಿದ್ರು. 

ಪ್ರಜಾಪ್ರಭುತ್ವಕ್ಕೆ ಬಿಜೆಪಿಯು ಅತ್ಯಂತ ಮಾರಕವಾಗಿ ಪರಿಣಮಿಸಿದೆ. ಮುಖ್ಯಮಂತ್ರಿಯಂತಹ ಹುದ್ದೆಯನ್ನು ಹೆಚ್ಚು ಹಣ ಕೊಟ್ಟವರಿಗೆ ನೀಡುವ ಪ್ರವೃತ್ತಿ ಒಳ್ಳೆಯದಲ್ಲ. ಪದೇ, ಪದೇ ಕರ್ನಾಟಕಕ್ಕೆ ಬರುವ ಅಮಿತ್ ಶಾರವರು ಯತ್ನಾಳ್ ಬಹಿರಂಗ ಪಡಿಸಿರುವ ವಿಷಯದ ಕುರಿತು ಪ್ರತಿಕ್ರಿಯಿಸಬೇಕು. ಇದರಲ್ಲಿ ಅವರಿಗೆ ಎಷ್ಟು ಪರ್ಸೆಂಟ್ ತಲುಪಿದೆ ಎನ್ನುವುದು ಬಯಲಾಗಬೇಕು ಎಂದರು. 

error: Content is protected !!