ಕೂಗು ನಿಮ್ಮದು ಧ್ವನಿ ನಮ್ಮದು

ಕುಖ್ಯಾತ ದುಬಾರಿ ಬೈಕ್ ಕಳ್ಳರ ಬಂಧನ

ಬೆಂಗಳೂರು: ಕೇಂದ್ರ ವಲಯದ ಆರಕ್ಷಕ ಮಹಾ ನಿರೀಕ್ಷಕರಾದ ಎಂ.ಚಂದ್ರಶೇಖರ್, ಐ.ಪಿ.ಎಸ್ ರವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಶ್ರೀ ಕೆ.ವಂಶಿ ಕೃಷ್ಣ, ಐ.ಪಿ.ಎಸ್ ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಲಕ್ಷ್ಮೀ ಗಣೇಶ್, ಕೆ.ಎಸ್.ಪಿ.ಎಸ್ ಮತ್ತು ನೆಲಮಂಗಲ ಉಪ ವಿಭಾಗದ ಡಿ.ಎಸ್.ಪಿರವರುಗಳ ಮಾರ್ಗದರ್ಶನದಲ್ಲಿ ಮಾದನಾಯಕನಹಳ್ಳಿ ಠಾಣಾ ಪಿ.ಐ ಮತ್ತು ಕ್ರೈಂ ಸಿಬ್ಬಂದಿಗಳು ಕುಖ್ಯಾತ 5 ಬೈಕ್ ಕಳ್ಳರನ್ನು ಬಂಧಿಸಿದ್ದಾರೆ.

ಅವರಿಂದ ಸುಮಾರು 40 ಲಕ್ಷ ಬೆಲೆ ಬಾಳುವ 46 ದುಬಾರಿ ಬೈಕ್ ಗಳನ್ನು ವಶಪಡಿಸಿಕೊಂಡಿರುತ್ತಾರೆ. ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿ/ಸಿಬ್ಬಂದಿಗಳಿಗೆ ಐ.ಜಿ.ಪಿ ಅವರು ಪ್ರಶಂಸನಾ ಪತ್ರ ವಿತರಿಸಿ ಪ್ರಶಂಸಿರುತ್ತಾರೆ.

error: Content is protected !!