ಕೂಗು ನಿಮ್ಮದು ಧ್ವನಿ ನಮ್ಮದು

ಸಿಎಂ ಬೊಮ್ಮಾಯಿ ಸರ್ಕಾರವನ್ನು ಯಾರೂ ಅಲ್ಲಾಡಿಸಲು ಆಗುವುದಿಲ್ಲ: ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ : ನೂತನ ಸಿಎಂ ಬಸವರಾಜ ಬೊಮ್ಮಾಯಿಯವರು ಬಹಳ ಮೃದು ಸ್ವಭಾದವರು ಆಗಿದ್ದಾರೆ. ಜೊತೆಗೆ ಅಪಸ್ವರ ಎತ್ತುವಂತವರಿಗೆ ಹದ ಹಾಕುತ್ತಾರೆ. ಇನ್ನೂ ಹೀಗಾಗಿ ಸಿಎಂ ಬೊಮ್ಮಾಯಿಯವರ ಸರ್ಕಾರವನ್ನ ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು KPCC ವಕ್ತಾರ ಬೇಳೂರು ಗೋಪಾಲಕೃಷ್ಣ ಅವರು ಹೇಳಿದ್ರು.

ಇನ್ನೂ ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಗೋಪಾಲಕೃಷ್ಣ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿರುವ ಉದ್ದೇಶ ಭಿನ್ನಮತೀಯರನ್ನು ಮಟ್ಟ ಹಾಕುವುದಕ್ಕೆ. ಇನ್ನೂ ಸಿಎಂ ಬೊಮ್ಮಾಯಿಯವರ ವಿರುದ್ಧ ಯಾರಾದರೂ ಧ್ವನಿ ಎತ್ತಿದ್ರೆ JDSನವರು ನಿಮ್ಮ ಜೊತೆ ನಾವಿದ್ದೇವೆ ಎನ್ನುತ್ತಾರೆ.

ಇನ್ನೂ ಸಚಿವ ಸ್ಥಾನ, ಖಾತೆ ಹಂಚಿಕೆ ವಿರುದ್ಧ ಅಪಸ್ವರ ಎತ್ತುವವರು ಸಹ ಅವರನ್ನು ಏನು ಮಾಡಲು ಸಾಧ್ಯವಿಲ್ಲ ಎಂದ್ರು. ಜೊತೆಗೆ ಸಿಎಂ ಆಗಿದ್ದ ಬಿ.ಎಸ್ ಯಡಿಯೂರಪ್ಪನವರನ್ನು ಆ ಸ್ಥಾನದಿಂದ ಏಕೆ ಕೆಳಗೆ ಇಳಿಸಿದ್ರು ಎಂಬುದೇ ತಿಳಿಯುತ್ತಿಲ್ಲ. ಇನ್ನೂ ಹಲವು ಮುಟ್ಟಾಳರು ಯಡಿಯೂರಪ್ಪನವರನ್ನು ಕೆಳಗೆ ಇಳಿಸಿದ್ದು ನನಗೆ ಬಹಳ ಬೇಸರ ಆಗಿದೆ.

ಜೊತೆಗೆ ಬಿ.ಎಸ್.ಯಡಿಯೂರಪ್ಪನವರಿಂದ ಶಿವಮೊಗ್ಗ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಆಗುತಿತ್ತು ಎಂದು ತಿಳಿಸಿದ್ರು. ಇನ್ನೂ ಸಚಿವ ಕೆ.ಎಸ್ .ಈಶ್ವರಪ್ಪನವರು ಸಿಎಂ ಆಗಿ ವಿವಾದಾತ್ಮಕ ಹೇಳಿಕೆ ನೀಡುವುದು ಅಷ್ಟು ಸರಿಯಲ್ಲ. ಜೊತೆಗೆ ಮಂತ್ರಿಯಾದವರು ಜನರ ಪರವಾಗಿ, ಎಲ್ಲಾ ವರ್ಗದ ಪರವಾಗಿ ಇರಬೇಕು. ಅದನ್ನಾ ಬಿಟ್ಟು ವಿವಾದಾತ್ಮಕ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದ್ರು. ಜೊತೆಗೆ ಇನ್ನಾದರೂ ತಾವು ಸಚಿವ ಎಂಬುದನ್ನು ಅರಿತುಕೊಂಡು ಎಚ್ಚರಿಕೆಯಿಂದ ಮಾತನಾಡಲಿ ಎಂದ್ರು.

error: Content is protected !!