ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಇದರಿಂದ, ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜೀವಭಯದಿಂದ ಮನೆಗಳನ್ನು ತೊರೆದಿರುವ ಜನರು ರಾತ್ರಿಯಿಡಿ ಚಳಿಯಲ್ಲಿ ರಸ್ತೆಯ ಮೇಲೆಯ ವಾಸವಾಗಿದ್ದಾರೆ.
ಹೌದು.. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವದರಿಂದ ರಾತ್ರಿ ಸಮಯದಲ್ಲಿ ಅಪಾರ ಪ್ರಮಾಣದಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ತೋಟದ ವಸತಿಯ ಮನೆಗಳಿಗೆ ಹಾಗೂ ಗುಡಿಸಲುಗಳಿಗೆ ನೀರು
ನುಗ್ಗಿದ್ದರಿಂದ ರಾತ್ರೋರಾತ್ರಿ ಮನೆಗಳನ್ನು ತೊರೆದು ಮೊಳವಾಡ ರಸ್ತೆ ಚಿಂಚಲಿ ಪಟ್ಟಣದ ಹತ್ತಾರು ಕುಟುಂಬಗಳು ಕೊರೆಯುವ ಚಳಿಯಲ್ಲಿ ರಸ್ತೆಯಲ್ಲೆ ಉಳಿಯುವ ಸ್ಥಿತಿ ಎದುರಾಗಿದೆ
ಮೂರು ಲಕ್ಷ ಕ್ಯೂಸೆಕ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದರು ಕೂಡ ಕಾಳಜಿ ಕೆಂದ್ರವನ್ನು ಪ್ರಾರಂಭಿಸುವುದಕ್ಕೆ ತಾಲೂಕಾ ಆಡಳಿತ ಮತ್ತು ಪಟ್ಟಣ ಪಂಚಾಯತಿ ನೆರೆ ಸಂತ್ರಸ್ತರ ಬಗ್ಗೆ ಇನ್ನೂವರೆಗೂ ಕಾಳಜಿ ತಗೆದುಕೊಂಡಿಲ್ಲ.ಹೀಗಾಗಿ ನೆರೆ ಸಂತ್ರಸ್ತರು ರಸ್ತೆಯ ಮೇಲೆ ವಾಸವಾಗುವ ಪರಿಸ್ಥಿರಿ ನಿಮಾರ್ಣವಾಗಿದ್ದು ಸದ್ಯ ನೆರೆ ಸಂತ್ರಸ್ತರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ
ಅಷ್ಟೇ ಅಲ್ಲದೆ ನೆರೆ ಸಂತ್ರಸ್ತರ ಸಹಾಯಕ್ಕೆ
ಸ್ಥಳೀಯರೇ ಮುಂದಾಗಿದ್ದು ಹತ್ತಾರೂ ಕುಟುಂಬಗಳು ರಾತ್ರೋರಾತ್ರಿ ಮನೆಗಳು ಖಾಲಿ ಮಾಡಿ ರಸ್ತೆಯ ಮೇಲೆ ವಾಸವಾಗಿದ್ದನ್ನು ತಿಳಿದ ಅಪ್ಪಾಸಾಬ ಸೌಂದಲಗಿ ಎಂಬುವರು ರಾತ್ರೋರಾತ್ರಿ ಮನೆಗಳು ಖಾಲಿ ಮಾಡಿಕೊಂಡ ರಸ್ತೆಯ ಮೇಲೆ ಮಲಗಿದ್ದ ಕುಟುಂಬಗಳಿಗೆ 50 ಸಾವಿರ ನಗದು ರೂಪಾಯಿಗಳನ್ನು ನೀಡಿ ಮಾನವಿಯತೆಯನ್ನು ಮೆರೆದಿದ್ದಾರೆ.