ಕೂಗು ನಿಮ್ಮದು ಧ್ವನಿ ನಮ್ಮದು

ಬೆಂಗಳೂರು: BBMPಗೆ ದಾಖಲೆಯ ಆಸ್ತಿ ತೆರಿಗೆ

ಬೆಂಗಳೂರು: ಕೊರೋನಾ ಬಳಿಕ ವರ್ಷದಿಂದ ವರ್ಷಕ್ಕೆ ಬಿಬಿಎಂಪಿಯ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷ ಮುಕ್ತಾಯಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಂತೆ ದಾಖಲೆಯ 3,118 ಕೋಟಿ ಪೆಬ್ರವರಿ ೨೮ ಕ್ಕೆ ಸಂಗ್ರಹವಾಗಿದೆ.

ಕಳೆದ 2021-22 ಆರ್ಥಿಕ ವರ್ಷದಲ್ಲಿ .3,089 ಕೋಟಿ ಸಂಗ್ರಹಿಸುವ ಮೂಲಕ ಮೊದಲ ಬಾರಿಗೆ .3 ಸಾವಿರ ಕೋಟಿಗೂ ಅಧಿಕ ಮೊತ್ತದ ವಸೂಲಿ ಮಾಡಿದ ಹೆಗ್ಗಳಿಕೆಗೆ ಬಿಬಿಎಂಪಿ ಪಾತ್ರವಾಗಿತ್ತು. ಆದರೆ, ಈ ಬಾರಿ ಆರ್ಥಿಕ ವರ್ಷ ಪೂರ್ಣಕ್ಕೂ ಒಂದು ತಿಂಗಳು ಬಾಕಿ ಇರುವಾಗಲೇ ಹೊಸ ದಾಖಲೆಯತ್ತ ಸಾಗುತ್ತಿದೆ. 30 ದಿನದಲ್ಲಿ 600 ಕೋಟಿ ನಿರೀಕ್ಷೆ:

ಸದ್ಯ ಕಚೇರಿ ದಿನಗಳಲ್ಲಿ ಸರಾಸರಿ 6ರಿಂದ 10 ಕೋಟಿ ಸಂಗ್ರಹವಾಗುತ್ತಿದ್ದು, ಮಾಚ್‌ರ್‍ ಅಂತ್ಯಕ್ಕೆ .600 ಕೋಟಿಗೂ ಅಧಿಕ ಆಸ್ತಿ ತೆರಿಗೆ ವಸೂಲಿ ಗುರಿ ಹಾಕಿಕೊಳ್ಳಲಾಗಿದೆ. ಒಟ್ಟಾರೆ, ಆರ್ಥಿಕ ವರ್ಷದಲ್ಲಿ .3,758 ಕೋಟಿ ವಸೂಲಿ ಮಾಡುವ ನಿರೀಕ್ಷೆಯನ್ನು ಕಂದಾಯ ಅಧಿಕಾರಿಗಳು ಹೊಂದಿದ್ದಾರೆ ಕೊರೋನಾ ಬಳಿಕ ಏರಿಕೆ:

ಕೊರೋನಾ ಸೋಂಕಿನ ಭೀತಿ ಆರಂಭಗೊಂಡ 2019-20ನೇ ಸಾಲಿನಲ್ಲಿ .2,659 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದರೆ, ಲಾಕ್‌ಡೌನ್‌, ಆರ್ಥಿಕ ಸಂಕಷ್ಟಎದುರಾದ 2020-21ನೇ ಸಾಲಿನಲ್ಲಿ .2860 ಕೋಟಿ ಹಾಗೂ 2021-22ರಲ್ಲಿ .3 ಸಾವಿರ ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಿತ್ತು.

ತೆರಿಗೆ ವಸೂಲಿ ಹೆಚ್ಚಳಕ್ಕೆ ಕಾರಣ

ಅಧಿಕ ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿತಯಾರಿಸಿ ವಸೂಲಿ ಮಾಡುವುದು. ಕಂದಾಯ ವಸೂಲಿ ಅಧಿಕಾರಿಗಳಿಗೆ ನಿರ್ದಿಷ್ಟಗುರಿ. ಬೆಸ್ಕಾಂ ಸೇರಿದಂತೆ ವಿವಿಧ ಸಾರ್ವಜನಿಕ ಇಲಾಖೆಗೆ ನೀಡಿದ ದಾಖಲೆ ಆಧರಿಸಿ ಪರಿಶೀಲಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ವಸೂಲಿಯಲ್ಲಿ ಹೆಚ್ಚಳವಾಗಿದೆ. ಜತೆಗೆ, ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿಗೆ ಇರುವ ವ್ಯವಸ್ಥೆಯ ಸುಧಾರಣೆ, ತೆರಿಗೆ ವಸೂಲಿಯಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿಗಳಿಗೆ ಪ್ರಶಸ್ತಿ, ಸನ್ಮಾನಿಸಲು ಮುಂದಾಗಿರುವುದು ಸಹ ತೆರಿಗೆ ಹೆಚ್ಚಳಕ್ಕೆ ಕಾರಣವಾಗಿದೆ.

ಗುರಿ ಸಾಧನೆ ಅಸಾಧ್ಯ?

ಈ ಹಿಂದಿನ ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಸಾಧಿಸಿದ ಒಂದೇ ಒಂದು ಉದಾರಣೆ ಇಲ್ಲ. 2021-22ನೇ ಸಾಲಿನಲ್ಲಿ .4 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯಲ್ಲಿ .3,088 ಕೋಟಿ ಸಂಗ್ರಹಿಸಿತ್ತು. 2022-23ರಲ್ಲಿ .4,189 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿ ಹಾಕಿಕೊಂಡಿದೆ. ಇನ್ನೊಂದು ತಿಂಗಳ ಅವಧಿಯಲ್ಲಿ .1 ಸಾವಿರ ಕೋಟಿ ಸಂಗ್ರಹ ಅಸಾಧ್ಯ ಎನ್ನಲಾಗುತ್ತಿದೆ.

ಆಸ್ತಿ ತೆರಿಗೆ ವಸೂಲಿಗೆ ತೆಗೆದುಕೊಂಡ ಹಲವು ಕ್ರಮಗಳಿಂದ ಸಂಗ್ರಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಫೆಬ್ರವರಿ ಅಂತ್ಯಕ್ಕೆ .3,100 ಕೋಟಿ ಗಡಿ ದಾಟಿದ್ದೇವೆ. ಆರ್ಥಿಕ ವರ್ಷದ ಕೊನೆಯ ವೇಳೆ .3,600ರಿಂದ .3,700 ಕೋಟಿ ಸಂಗ್ರಹಿಸುವ ನಿರೀಕ್ಷೆ ಇದೆ ಅಂತ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ. ಆರ್‌.ಎಲ್‌.ದೀಪಕ್‌ ತಿಳಿಸಿದ್ದಾರೆ.

ಪ್ರಸಕ್ತ ವರ್ಷ ವಲಯವಾರು ಆಸ್ತಿ ತೆರಿಗೆ ಸಂಗ್ರಹ ವಿವರ (ಕೋಟಿ)
ವಲಯ ಸಂಗ್ರಹ

ಬೊಮ್ಮನಹಳ್ಳಿ .333.79
ದಾಸರಹಳ್ಳಿ .93.2
ಪೂರ್ವ .563.16
ಮಹದೇವಪುರ .813.43
ಆರ್‌ಆರ್‌ನಗರ .209.98
ದಕ್ಷಿಣ .465.07
ಪಶ್ಚಿಮ .346.87
ಯಲಹಂಕ .275.31
ಒಟ್ಟು .3,118.81

ಕಳೆದ ಐದು ವರ್ಷ ತೆರಿಗೆ ಸಂಗ್ರಹ ವಿವರ
ವರ್ಷ ಗುರಿ ಸಂಗ್ರಹ

2018-19 .3,100 .2,529
2019-20 .3,500 .2,659
2020-21 .3,500 .2,860
2021-22 .4,000 .3,088
2022-23 .4,189 .3,118 (ಫೆ.28)

error: Content is protected !!