ಕೂಗು ನಿಮ್ಮದು ಧ್ವನಿ ನಮ್ಮದು

ರೆಡ್ ಟೇಪ್ ಕಿತ್ತಾಕಿದ್ದಕ್ಕೆ ಗೇಟ್ ಲಾಕ್ ಮಾಡಿ ಕೀಲಿ ಎತ್ಕೊಂಡು ಹೋದ BBMP ಅಧಿಕಾರಿಗಳು

ಬೆಂಗಳೂರು: ಸೀಲ್‍ಡೌನ್ ಮಾಡಿದ್ದ ಹಾಸ್ಟೆಲನ ಮುಂದೆ ಅಧಿಕಾರಿಗಳು ಕೆಂಪು ಟೇಪನ್ನು ಹಾಕಿದ್ರು. ಆದ್ರೆ ಕೋರೊನಾ ಸೋಂಕಿತರ ಕಡೆಯವರು ಕೆಂಪು ಟೇಪನ್ನು ತೆಗೆದು ಹಾಕಿರುವುದರಿಂದ B.B.M.P ಯ ಅಧಿಕಾರಿಗಳು ಹಾಸ್ಟೆಲ್ ಗೇಟ್‍ಗೆ ಬೀಗ ಹಾಕಿ ಆ ಕೀಲಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಬೆಂಗಳೂರಿನ ಅಟ್ಟೂರು ಲೇಔಟ್ ನಲ್ಲಿ ಹಾಸ್ಟೆಲ್ ಕಂ ಕೋಚಿಂಗ್ ಸೆಂಟರ್ ನ ೨ ವಿದ್ಯಾರ್ಥಿಗಳಿಗೆ ಕೋವಿಡ್ ಸೊಂಕು ದೃಢವಾಗಿದೆ ಇನ್ನೂ ವಿದ್ಯಾರ್ಥಿಗಳ ಕಡೆಯವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ೮ ಮಂದಿಗೆ ಕೋವಿಡ್ ಸೋಂಕು ಇರುವುದು ತಿಳಿದುಬಂದಿದೆ. ಸದ್ಯ ಕೋವಿಡ್ ಸೋಂಕಿತ ವಿದ್ಯಾರ್ಥಿಗಳನ್ನು ಹಜ್ ಭವನದ ಕೋರೊನಾ ಸೆಂಟರ್ಗೆ ಕಳಿಸಲಾಗಿದೆ.

ಇನ್ನೂ ಹಾಸ್ಟೆಲ್ ಕಟ್ಟಡವನ್ನು ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಿ ಸೀಲ್‍ಡೌನ್ ಮಾಡಲಾಯಿತು. ಜೊತೆಗೆ ಹಾಸ್ಟೆಲ್ ನಲ್ಲಿದ್ದ ಕೋವಿಡ್ ಸೋಂಕಿತರ ಕಡೆಯವರು ಕೆಂಪು ಟೇಪ್ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಇದರಿಂದ ಅಧಿಕಾರಿಗಳು ಕೋವಿಡ್ ಸೋಂಕಿತರ ಕಡೆಯವರನ್ನು ಮನೆಯಲ್ಲಿ ಇರಿಸಲು ಗೇಟ್ಗೆ ಬೀಗ ಹಾಕಿ ಕೀ ತೆಗೆದುಕೊಂಡು ಹೋಗಿದ್ದಾರೆ. ಜೊತೆಗೆ ಆ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಕ್ಲೋಸ್ ಮಾಡಿದ್ದಾರೆ.

error: Content is protected !!