ಬಳ್ಳಾರಿ: ಈಶಾನ್ಯ ಶಿಕ್ಷಕ ಕ್ಷೇತ್ರದ ಚುನಾವಣೆ ಹಿನ್ನೆಲೆ ಬಸವರಾಜ ಹೊರಟ್ಟಿ ಸುದ್ದಿಗೋಷ್ಟಿ ನಡೆಸಿದ್ದಾರೆ. ತಿಮ್ಮೆಪುರ್ಲಿ ಪರ ಮತಯಾಚನೆ ಮಾಡಲು ಜೆಡಿಎಸ್ ನಾಯಕರು ಆಗಮಿಸಿದ್ದು, ಈ ವೇಳೆ ಮಾತನಾಡಿದ ಬಸವರಾಜ್ ಹೊರಟ್ಟಿ, ಚುನಾವಣೆ ರಾಜಕಾರಣ ಭಯ ಹುಟ್ಟಿಸುತ್ತದೆ. ಯಾವ ಮಟ್ಟಕ್ಕೆ ಹೋಗ್ತದೆಯೋ ಗೊತ್ತಿಲ್ಲ ಎಂದು ಅತಂಕ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಯಾರಿಗೂ ಬೇಡವಾದ ಇಲಾಖೆಯಾಗಿದೆ ಇದು ಎಲ್ಲ ಸರ್ಕಾರಕ್ಕೆ ಅನ್ವಯವಾಗುತ್ತದೆ ಎಂದಿರುವ ಅವರು, ವಿದ್ಯಾಗಮದಿಂದ ಶೇ 5 ರಷ್ಟು ವಿದ್ಯಾರ್ಥಿಗಳು ಪಾಠ ಕಲಿತಿಲ್ಲ ಆದ್ರೇ 72 ಜನರು ಶಿಕ್ಷಕರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕುಮಾರ ಸ್ವಾಮಿ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಗಳೇ ಇರಲಿಲ್ಲ ಎಂದು ಪರೋಕ್ಷವಾಗಿ ಮಸಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೂ ಟಾಂಗ್ ಕೊಟ್ಟರು. ಪರಿಷತ್ತಿನ ಘನತೆ ಗೌರವ ಉಳಿದಿಲ್ಲ.. ಪರಿಷತ್ತಿನಲ್ಲಿ ಪ್ರತಿಭಟನೆ ಮಾಡ್ತಿದ್ದಾರೆ. ಇದು ಬೇಸರದ ಸಂಗತಿ ಎಂದಿರುವ ಬಸವರಾಜ್ ಹೊರಟ್ಟಿ, ಮರ್ಯಾದೆ ಇದ್ದವರು ರಾಜಕೀಯದಲ್ಲಿ ಇರಬೇಕೋ ಬೇಡ್ವೋ ಅನ್ನೋ ಚಿಂತನೆ ನಡೆತಿದೆ ಎಂದಿದ್ದಾರೆ. ಶಿಕ್ಷಕರ ವರ್ಗಾವಣೆ ವಿಚಾರ ನೀತಿ ಸಂಹಿತೆ ಉಲ್ಲಂಘನೆ ಯಾಗಿದೆ.. ಈ ಬಗ್ಗೆ ಆಯೋಗಕ್ಕೆ ತಿಳಿಸುತ್ತೇನೆ ಎಂದ್ರು. ಇನ್ನು ಸಮ್ಮಿಶ್ರ ಸರ್ಕಾರದಲ್ಲಿ ತಮ್ಮನ್ನು ಕಡೆಗಣಿಸಿದ್ದು ಬೇಸರವಾಗಿದೆ. ಶಿಕ್ಷಣ ಮಂತ್ರಿ ಮಾಡಿದ್ರೇ ಸಾಕಷ್ಟು ಕೆಲಸ ಮಾಡುತ್ತಿದ್ದೆ. ಈಗ ನನಗೆ ರಾಜಕೀಯವೇ ಬೇಸರವಾಗಿದೆ. ಆದ್ರೇ ಚುನಾವಣೆಗೆ ನಿಲ್ಲಲ್ಲವೆಂದು ಹೇಳೋಕೆ ಆಗ್ತಿಲ್ಲ.. ಯಾಕಂದ್ರೇ ರಾಜಕೀಯ ಡ್ರಗ್ ಇದ್ದಂತೆ ಎಂದು ಮನದಾಳವನ್ನು ಹೊರಟ್ಟಿ ತೆರೆದಿಟ್ಟಿದ್ದಾರೆ. ಪಕ್ಷದಲ್ಲಿ ಒಂದಷ್ಟು ಹೆಚ್ಚು ಕಡಿಮೆಯಾಗಿದೆ ಎಂದ ಎಂಎಲ್ಸಿ ಶ್ರೀಕಂಠೆಗೌಡರ ಮಾತಿಗೆ ಪ್ರತಿಕ್ರಿಯಿಸಿದ ಹೊರಟ್ಡಿ, ದೇವೇಗೌಡರಿಗೆ ರಾಜ್ಯದ ಕಾಳಜಿ ಇದೆ. ದೇವೇಗೌಡರ ಮೇಲೆ ನನಗೆ ವಿಶ್ವಾಸವಿದೆ. ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಬೇಡಿ ಎಂದು ದೇವೆಗೌಡರಿಗೆ ಹೇಳಿದ್ದೇನೆ. ಯಡಿಯೂರಪ್ಪ, ಸಿದ್ದರಾಮಯ್ಯಕ್ಕಿಂತ ನಾನು ಸಿನಿಯರ್. ಆದ್ರೆ ನನ್ನ ಹಣೆಬರಹ ಸರಿಯಿಲ್ಲ. ನಾನು ಇಲ್ಲೇ ಉಳಿದೆ. ಅವರು ಮಂತ್ರಿ ಮುಖ್ಯಮಂತ್ರಿಯಾದ್ರು ಎಂದರು.