ಕೂಗು ನಿಮ್ಮದು ಧ್ವನಿ ನಮ್ಮದು

ಬೊಮ್ಮಾಯಿ ಅವರು ಸಿಎಂ ಆಗುತ್ತಿದ್ದಂತೆ ಈಗ ಆ ಊರೆಲ್ಲೆಲ್ಲಾ ಹಬ್ಬದ ಸಂಭ್ರಮ! ಹಾಗಾದರೆ ಯಾವುದು ಆ ಊರು ಅಂತೀರಾ ಈ ಸ್ಟೋರಿ ಓದಿ

ಧಾರವಾಡ: ರಾಜ್ಯ ರಾಜಕಾರಣದಲ್ಲಿ ಅದರಲ್ಲು ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ರಾಜೀನಾಮೆ ಯಿಂದ ಯಾರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂಬ ಕುತೂಹಲ ಎಲ್ಲಡೆ ಮನೆ ಮಾಡಿತ್ತು, ಇದರ ನಡುವೆ ಹಿರಿಯ ಅನುಭವಿ ರಾಜಕಾರಣಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ. ಧಾರವಾಡ ಜಿಲ್ಲೆಯ ಕಮಡೊಳ್ಳಿ ಎಂಬ ಗ್ರಾಮದಲ್ಲಿ ಈಗ ಸಂತಸ ಮನೆ ಮಾಡಿದೆ.ಇನ್ನು ಜನತಾ ಪರಿವಾರದಿಂದ ಹಿಂದೆ ಎಸ್.ಆರ್.ಬೊಮ್ಮಾಯಿ ಸಿಎಂ ಆಗಿದ್ದರು. ಅದಾದ ಮೂರು ದಶಕಗಳ ನಂತ್ರ ಅವರ ಪುತ್ರ ಬಸವರಾಜ ಬೊಮ್ಮಾಯಿ ಬಿಜೆಪಿಯಿಂದ ಸಿಎಂ ಆಗಿದ್ದಾರೆ. ಪಕ್ಷಗಳು ಬೇರೆ ಬೇರೆಯಾಗಿದ್ದರೂ ಒಂದೇ ಗ್ರಾಮದವರಾದ ತಂದೆ ಮತ್ತು ಮಗ ಇಬ್ಬರು ಸಿಎಂ ಆಗಿರೋದು ವಿಶೇಷ. ಹೀಗೆ ಇಬ್ಬರು ಸಿಎಂಗಳನ್ನು ಕೊಟ್ಟ ಕೀರ್ತಿಗೆ ಪಾತ್ರವಾಗಿರೋ ಗ್ರಾಮ ಕಮಡೊಳ್ಳಿ

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕಮಡೊಳ್ಳಿಯಲ್ಲಿ ಸಂಭ್ರಮವೋ ಸಂಭ್ರಮ. ಇಬ್ಬರು ಸಿಎಂ ಗಳನ್ನು ಕೊಟ್ಟ ಹೆಗ್ಗಳಿಕೆ ಕಮಡೊಳ್ಳಿ ಗ್ರಾಮದ್ದಾಗಿದೆ.ಬಸವರಾಜ ಬೊಮ್ಮಾಯಿ ತಂದೆ ಎಸ್.ಆರ್.ಬೊಮ್ಮಾಯಿ ಈ ಹಿಂದೆ ಸಿಎಂ ಆಗಿದ್ರು. ಎಸ್.ಆರ್.ಬೊಮ್ಮಾಯಿ ಧಾರವಾಡ ಜಿಲ್ಲೆಯನ್ನು ತಮ್ಮ ರಾಜಕೀಯ ಅಖಾಡವನ್ನಾಗಿಸಿಕೊಂಡಿದ್ದರೆ, ಬಸವರಾಜ ಬೊಮ್ಮಾಯಿ ಮಾತ್ರ ನೆರೆಯ ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರವನ್ನು ರಾಜಕೀಯ ಕಾರ್ಯಸ್ಥಾನವನ್ನಾಗಿಸಿಕೊಂಡಿದ್ದರು. ತಂದೆಯಂತೆ ಚಾಣಾಕ್ಷ ರಾಜಕಾರಣಿ ಎನಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ತಂದೆಯ ಹಾದಿಯಲ್ಲೇ ಸಿಎಂ ಗಾದಿಯತ್ತ ಮುನ್ನಡೆದಿದ್ದಾರೆ.

error: Content is protected !!