ಬೆಂಗಳೂರು : ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡೆಲ್ಲಿ ಯಲ್ಲಿ ಟಿಕೆಟ್ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಇನ್ನು ಸ್ವಕ್ಷೇತ್ರ ಶಿಗ್ಗಾವಿ ಟಿಕೆಟ್ ಪಡೆಯಲು ಹರಸಾಹಾಸ ಪಡುತ್ತಿದ್ದಾರೆ ಎನ್ನಲಾಗುತ್ತಿದೆ.
ನೀವು ಮುಖ್ಯಮಂತ್ರಿ ಆಗಿದ್ದೀರಿ ನಿಮಗೆ ಶಿಗ್ಗಾವಿ ಕ್ಷೇತ್ರಕ್ಕೆ ಯಾಕೆ ಸೀಮಿತ ಮಾಡಿಕೊಳ್ಳುತ್ತಿರಿ, ಬಿಜೆಪಿ ಬಲ ಹೀನ ಆಗಿರುವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಪಕ್ಷವನ್ನು ಯಾಕೆ ಬೆಳಸಬಾರದು? ಎಂದು ಹೈ ಕಮಾಂಡ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೊಸ ಚ್ಯಾಲೆಂಜ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಬೊಮ್ಮಾಯಿ ಸ್ಪರ್ಧೆ ಎಲ್ಲಿಂದ ಎನ್ನುವ ಬಗ್ಗೆ ಈಗಾಗಲೇ ಸ್ಪಷ್ಟಿಕರಣ ನೀಡಿರುವ ಮುಖ್ಯಮಂತ್ರಿ, ಶಿಗ್ಗಾವಿ ಇಂದಲೇ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಶಿಗ್ಗಾವಿ ಜೊತೆಗೆ ಹಳೆ ಮೈಸೂರು ಅಥವಾ ಕಾಂಗ್ರೆಸ್ ಪ್ರಭಲ್ಯ ಇರುವ ಕ್ಷೇತ್ರ ಬಗ್ಗೆ ಚಿಂತನೆ ನಡೆಸಿ, ಇದರಿಂದ ಬಿಜೆಪಿ ಪಕ್ಷಕ್ಕೆ ಶಕ್ತಿ ಬರಲಿದೆ, ಎಂದು ನಿನ್ನೆ ನಡೆದ ಸಭೆಯಲ್ಲಿ ಕಮಲ ವರಿಷ್ಠರು ಸಲಹೆ ನೀಡಿದ್ದಾರೆ.
ಇದಲ್ಲದೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಬಗ್ಗೆ ಗಂಭೀರ ಸೂಚನೆ ನೀಡಿದ ಬಿಜೆಪಿ ಹೈ ಕಮಾಂಡ್,ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿ ಭದ್ರವಾದ ಬುನಾದಿ ಹಾಕಲು ಘಟಾನುಘಟಿ ನಾಯಕರನ್ನೇ ಕಣಕ್ಕಿಳಿಸುವ ಚಿಂತನೆ ನಡೆಸಿದ್ದಾರೆ.
ಹಾಗಾದ್ರೆ ಏನದು ಹಳೆಯ ಮೈಸೂರು ಭಾಗದಲ್ಲಿನ ಬಿಜೆಪಿಯ ತಂತ್ರ?
ಹಳೆಯ ಮೈಸೂರು ಭಾಗದ ಪ್ರತಿಷ್ಠಿತ ಕ್ಷೇತ್ರಗಳಾಗಿರುವ ವರುಣಾ, ಕನಕಪುರ, ಚನ್ನಪಟ್ಟಣ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಅಡ್ಜೆಟ್ಮೆಂಟ್ ಪಾಲಿಟಿಕ್ಸ್ ತಪ್ಪಿಸಲು ಮಾಸ್ಟರ್ಪ್ಲಾನ್ ರೂಪಿಸಿದ್ದಾರೆ.
ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಆಖಾಡಕ್ಕೆ ಇಳಿಯಬೇಕು ಎಂದು ಸೂಚನೆ ರವಾನಿಸಿದ್ದಾರೆ ಎನ್ನಲಾಗಿದೆ.
ಆರ್.ಅಶೋಕ್, ಡಾ.ಸಿ.ಎನ್. ಅಶ್ವತ್ಥ್ನಾರಾಯಣ್, ವಿ. ಸೋಮಣ್ಣ ಹಾಗೂ ಕೆ.ಎಸ್. ಈಶ್ವರಪ್ಪರ ಹೆಸರಿನ ಮುಂದೆ ಮತ್ತೊಂದೊಂದು ಕ್ಷೇತ್ರಗಳ ಆಯ್ಕೆ ಮಾಡಲಾಗಿದೆ.ಆರ್.ಅಶೋಕ್ಗೆ ಪದ್ಮನಾಭನಗರ ಕ್ಷೇತ್ರದ ಜೊತೆಗೆ ಕನಕಪುರ ಕೂಡ ನೀಡುವುದು.ಅಶ್ವತ್ಥ್ನಾರಾಯಣ್ಗೆ ಮಲ್ಲೇಶ್ವರಂ ಜೊತೆಗೆ ಚನ್ನಪಟ್ಟಣ ಕೂಡ ನೀಡುವುದು.ವಿ.ಸೋಮಣ್ಣರಿಗೆ ಗೋವಿಂದರಾಜನಗರ ಜೊತೆಗೆ ವರುಣಾ ನೀಡುವುದು.ಸಿ.ಪಿ.ಯೋಗೇಶ್ವರ್ಗೆ ಚನ್ನಪಟ್ಟಣದ ಬದಲಿಗೆ ರಾಮನಗರದಲ್ಲಿ ಕಣಕ್ಕೆ ಇಳಿಸುವುದು.
ಇನ್ನು ಒಂದು ವೇಳೆ ಏನಾದ್ರೂ ಸಿದ್ಧರಾಮಯ್ಯ ಕೋಲಾರದಿಂದ ಕಣಕ್ಕೆ ಇಳಿದಿದ್ರೆ ಆದ್ರೆ, ಶಿವಮೊಗ್ಗ ಜೊತೆಗೆ ಈಶ್ವರಪ್ಪರಿಗೆ ಕೋಲಾರ ಸಹ ನೀಡುವುದು.ಈ ಮೂಲಕ ಹಳೆಯ ಮೈಸೂರು ಭಾಗದ ಕೆಲ ಕ್ಷೇತ್ರಗಳನ್ನು ಹೈವೋಲ್ಟೇಜ್ ಕ್ಷೇತ್ರಗಳಾಗಿ ಮಾರ್ಪಾಡು ಮಾಡುವ ಚಿಂತನೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಸಜಾಗಿದ್ದಾರೆ.
ಈ ನೀಲಿ ನಕ್ಷೆಯ ಪ್ರಕಾರವೇ ನಡೆದ್ರೆ, ಹಳೆಯ ಮೈಸೂರು ಭಾಗದಲ್ಲಿ ಜಿದ್ದಾಜಿದ್ದಿನ ಕ್ಷೇತ್ರಗಳಾಗಿ ಹಲವು ಕ್ಷೇತ್ರಗಳಾಗುವುದು ನಿಶ್ಚಿತ, ಎಂಬ ಲೆಕ್ಕಾಚಾರದಲ್ಲಿ ಹೈ ಕಮಾಂಡ್ ನಾಯಕರದ್ದು.ಇನ್ನು ಸಿಎಂ ಬೊಮ್ಮಾಯಿ ಡೆಲ್ಲಿ ಯಲ್ಲಿ ಟಿಕೆಟ್ ಜಗ್ಗಾಟದಲ್ಲಿ ಇದ್ದು, ಇಂದು ಅಥವಾ ನಾಳೆ ಬಿಜೆಪಿ ಟಿಕೆಟ್ ಘೋಷಣೆ ಆಗಲಿದೆ, ಕೊನೆ ಹಂತದಲ್ಲಿ ಪ್ಲಾನ್ A ಪ್ಲಾನ್ B ಅಥವಾ ಇನ್ಯಾವ ಪ್ಲಾನ್ ಹಾಕುತ್ತಾರೆ ಎನ್ನುವುದು ಕಾದು ನೋಡಬೇಕಿದೆ.