ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸರ್ಕಾರ ನೀತಿ ನಿಯಮಗಳ ಪ್ರಕಾರ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ.
ಈದ್ಗಾ ಮೈದಾನ ವಿವಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಅದು ಕಂದಾಯ ಇಲಾಖೆ ಜಾಗ ಅಂತ ನಿರ್ಧಾರ ಆಗಿದೆ. ಕಂದಾಯ ಇಲಾಖೆ ಜಾಗ ಅಂದರೆ ಅದು ಸರ್ಕಾರದ ಜಾಗ. ಸರ್ಕಾರದ ಜಾಗದಲ್ಲಿ ಸರ್ಕಾರದ ನೀತಿ ನಿಯಮಗಳ ಪ್ರಕಾರ ಅಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಸ್ಪಷ್ಟವಾಗಿ ತಿಳಿಸಿದ್ರು.
ಶಾಸಕ ಜಮೀರ್ ಅಹ್ಮದ್ರಿಂದ ಗಣೇಶೋತ್ಸವ ಮಾಡಲು ಬಿಡೊಲ್ಲ ಎಂಬ ಹೇಳಿಕೆಗೆ ತಿರುಗೇಟು ಕೊಟ್ಟ ಸಿಎಂ, ಜಮೀರ್ ಹೇಳಿಕೆಗೆ ಬೆಲೆ ಇಲ್ಲ. ಯಾರ್ ಏನೇ ಹೇಳಿದರು ಕಾನೂನು ಪ್ರಕಾರವೇ ಕಾರ್ಯಕ್ರಮಗಳು ನಡೆಯುತ್ತವೆ. ಸರ್ಕಾರದ ನೀತಿ ನಿಯಮದ ಪ್ರಕಾರ ಕಾರ್ಯಕ್ರಮ ನಡೆಯುತ್ತವೆ ಎಂದು ಟಾಂಗ್ ಕೊಟ್ಟರು