ವಿಜಯಪುರ: ಸಿಂದಗಿ ಬೈ ಎಲೆಕ್ಷನ್ ಮತ ಎಣಿಕೆಯಲ್ಲಿ BJP ಮುನ್ನಡೆ ಸಾಧಿಸುತ್ತಿದ್ದಂತೆ ಅಭ್ಯರ್ಥಿ ರಮೇಶ್ ಭೂಸನೂರ ಸಂತಸ ವ್ಯಕ್ತಪಡಿಸಿದ್ರು. ಮತ ಎಣಿಕೆ ಹತ್ತಿರ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಭೂಸನೂರ, ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದೇವೆ. ಮೊದಲ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದೇನೆ. ಕಳೆದ ಬಾರಿ ನಾನು ಕಳೆದುಕೊಂಡಿದ್ದೆ. ಈ ಬಾರಿ ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಇದೇ ವೇಳೆ ಮೊಸಳೆ ಕಣ್ಣೀರು ಸುರಿಸುವ ಕಾಲ ಹೋಯಿತು. ಜನರಿಗೆ ಕೊಟ್ಟ ಭರವಸೆ ಯಾರು ಈಡೇರಿಸುತ್ತಾರೆ. ನಾವೀಗ ಭರವಸೆ ಕಾಲದಲ್ಲಿದ್ದೇವೆ. ಕಳೆದ ಬಾರಿ ಕಳೆದುಕೊಂಡಿರುವ ಅನುಕಂಪ ನನ್ನ ಮೇಲಿದೆ. ಜನರ ಒಲವು ನನ್ನ ಕಡೆ ಇದೆ. ಕಾಂಗ್ರೆಸ್ಗೆ ಅನುಕಂಪ ಇಲ್ಲ. ಇಪ್ಪತೈದು ಸಾವಿರ ಮತಗಳ ಅಂತರದಿಂದ ಗೆಲುವಿನ ವಿಶ್ವಾವಿಗ ನನಗಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿಎಸ್ವೈ, ಸಿಎಂ ಬಸವರಾಜ ಬೊಮ್ಮಾಯಿ ಸಾಧನೆ ಗೆಲುವಿಗೆ ಕಾರಣ ಎಂದು ರಮೇಶ್ ಭೂಸನೂರ ಹೇಳಿದ್ರು.
ಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ನಾವು ಪ್ರತ್ಯಾರೋಪ ಮಾಡಿದ್ದೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ವತಃ ಹಣ ಹಂಚಿದ್ದು ನೀವು ನೋಡಿದ್ದೀರಿ. ನಾನು ಗ್ರಾಮ ಪಂಚಾಯಿತಿಯಿಂದ ವಿಧಾನಸಭೆಯವರೆಗೆ ಹೋಗಿದ್ದೇನೆ ಎಂದ್ರು. ಇದೀಗ ಮತ ಎಣಿಕೆ ಹತ್ತಿರ BJP ಕಾರ್ಯಕರ್ತರು ಜೈಕಾರ ಹಾಕಿದ್ದರಿಂದ ಪೊಲೀಸರು ಕಾರ್ಯಕರ್ತರನ್ನು ಹೊರ ಕಳುಹಿಸಿ, ಮತ ಎಣಿಕೆ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿದ್ರು.