ಕೂಗು ನಿಮ್ಮದು ಧ್ವನಿ ನಮ್ಮದು

ಬೆಂಗಳೂರು ಉಸ್ತುವಾರಿಗಾಗಿ ವಿ.ಸೋಮಣ್ಣ, ಆರ್.ಅಶೋಕ್ ಮಧ್ಯೆ ಕೋಲ್ಡ್ ವಾರ್ ಸಿಎಂ ಬೊಮ್ಮಾಯಿಗೆ ಸಂಕಟ

ಬೆಂಗಳೂರು: ಶೀಘ್ರದಲ್ಲಿಯೇ ಅಧಿಕೃತವಾಗಿ ಜಿಲ್ಲಾ ಉಸ್ತುವಾರಿಗಳ ಹಂಚಿಕೆಗೆ ಪ್ಲಾನ್ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಬೆಂಗಳೂರು ನಗರದ ಜಿಲ್ಲಾ ಉಸ್ತುವಾರಿ ಆಗಲು ಸಚಿವ ವಿ. ಸೋಮಣ್ಣ ಮತ್ತು ಅಶೋಕ್ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು, ಅಶೋಕ್‍ಗೆ ಜಿಲ್ಲಾ ಉಸ್ತುವಾರಿ ಆಗುವ ಅವಕಾಶ ತಪ್ಪಿಸಲು ಹಲವಾರು ತಂತ್ರಗಳು ನಡೆಯುತ್ತಿದ್ದು, ಸೋಮಣ್ಣಗೆ ಕೆಲ BJP ಶಾಸಕರಿಂದಲೇ ಬೆಂಬಲ ದೊರೆಯುತ್ತಿದೆ.

ಅಶೋಕ್ ಅವರಿಗೆ ಶತಾಯಗತಾಯ ಬೆಂಗಳೂರು ಉಸ್ತುವಾರಿಯನ್ನು ಕೈ ತಪ್ಪಿಸಬೇಕೆಂದು ವಿರೋಧಿ ಬಣಗಳು ಒಂದಾಗಿದ್ದು, ವಿ. ಸೋಮಣ್ಣ ಪರವಾಗಿ ಬ್ಯಾಟ್ ಬೀಸಿದ್ದಾರೆ. ಇದರಿಂದಾಗಿ ಸರ್ಕಾರದಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದ್ದು, ಸದ್ಯ ಆರ್.ಅಶೋಕ್ ಒಂಟಿಯಾಗಿ ಹೋರಾಡುತ್ತಿದ್ದಾರೆ. ಹಾಗಾಗಿ ಇಬ್ಬರ ನಡುವೆ ಇರುವ ಮನಸ್ತಾಪವನ್ನು ಬಗೆಹರಿಸಲು ಸಿಎಂ ಬಸವರಾಜ್ ಬೊಮ್ಮಾಯಿಯವರು ಇವತ್ತು ಚರ್ಚೆ ನಡೆಸಲಿದ್ದು, ಬೆಂಗಳೂರು ಅಷ್ಟೇ ಅಲ್ಲದೇ ಉಳಿದ ಜಿಲ್ಲೆಗಳಲ್ಲಿ ಇಂಥ ಸಂಘರ್ಷ ಆಗದಂತೆ ಗಮನ ವಹಿಸುತ್ತಿದ್ದಾರೆ. ಒಟ್ಟಾರೆ ಇವರಿಬ್ಬರ ಸಂಧಾನ ಮಾಡಿಸುವಲ್ಲಿ ಸಕ್ಸಸ್ ಆಗ್ತಾರಾ ಮುಖ್ಯಮಂತ್ರಿ? ಬೆಂಗಳೂರು ಉಸ್ತುವಾರಿ ಯಾರಾಗ್ತಾರೆ? ಈ ಎಲ್ಲ ಗೊಂದಲಗಳು ಬಗೆಹರಿಯುತ್ತಾ ಅಥವಾ ಮತ್ತಷ್ಟು ಜಟಿಲ ಆಗುತ್ತಾ? ಎಂಬುವುದನ್ನು ನಾವು ನೀವುಗಳು ಕಾದು ನೋಡಬೇಕಿದೆ.

error: Content is protected !!