ಕೂಗು ನಿಮ್ಮದು ಧ್ವನಿ ನಮ್ಮದು

ಯಡಿಯೂರಪ್ಪನವರು ಮೊಮ್ಮಕ್ಕಳನ್ನು ಆಡಿಸುತ್ತಾ ಮನೆಯಲ್ಲಿ ಇರಲಿ:ಯತ್ನಾಳ್

ವಿಜಯಪುರ: ನಾನು ಸಚಿವ ಸ್ಥಾನಕ್ಕೆ ಆಸೆ ಪಡುವುದಿಲ್ಲಾ, ಆದ್ರೆ ಹೈಕಮಾಂಡ್ ನನಗೆ ಸಚಿವ ಸ್ಥಾನ ಕೊಟ್ಟರೆ ಅದನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದೇನೆ. ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ರು. ಇನ್ನೂ
ನನಗೆ ಕರ್ನಾಟಕದ ಸಿಎಂ ಆಗಿ ಕೆಲಸ ಮಾಡುವ ತಾಕತ್ತು ಇದೆ. ನನ್ನನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ.

ನನ್ನನ್ನು ಸದುಪಯೋಗ ಮಾಡಿಕೊಂಡರೆ ಮುಂದೆ ರಾಜ್ಯದಲ್ಲಿ ೧೫೦ ಸ್ಥಾನಗಳು ಬರುತ್ತದೆ. ಯಾರು ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಅಡ್ಡಿಯಾದರೊ, ಅವರ ರಾಜಕೀಯ ಭವಿಷ್ಯ ಮುಗಿಯದೆ. ವಿಶ್ರಾಂತಿ ತೆಗೆದುಕೊಳ್ಳಲಿ, ಜೊತೆಗೆ ಮೊಮ್ಮಕ್ಕಳನ್ನು ಆಟವಾಡಿಸುತ್ತಾ ಮನೆಯಲ್ಲಿ ಇರಲಿ ಎಂದು ಬಿ.ಎಸ್ವೈಗೆ ಟಾಂಗ್ ನೀಡಿದ್ರು
ಇನ್ನೂ ವಿಜಯಪುರಕ್ಕೆ ಈ ಸಲ ಅನ್ಯಾಯ ಆಗಲ್ಲ, ಬಿ.ಎಸ್ ಯಡ್ಡಿಯೂರಪ್ಪನವರ ಮನೆಯಲ್ಲಿ ಈಗಾಗಲೇ ಒಬ್ಬರು ಇದ್ದಾರೆ.

ಇನ್ನೂ ಸಿಎಂ ಸ್ಥಾನವನ್ನು ಎಷ್ಟು ಜನರಿಗೆ ಅಂತಾ ಕೊಡುವುದು. ಒಂದು ಮನೆಯಲ್ಲಿ ಎಷ್ಟು ಜನ MLA,MP ಆಗಬೇಕು. ಜೊತೆಗೆ ಹೈಕಮಾಂಡ್‍ಗೆ ಗೊತ್ತಿದೆ. ಈ ಅನುವಂಶಿಕವನ್ನು ಮುಂದುವರೆಸಬಾರದೆಂದು ಯಡ್ಡಿಯೂರಪ್ಪನವರು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದಾರೆ. ಇನ್ನೂ ಅವರಿಗೂ ಬೆನ್ನಿಗೆ ಚೂರಿ ಹಾಕದೆ ಇದ್ದರೆ ಸಾಕು ಎಂದು ಹೇಳಿದ್ದಾರೆ. ಇನ್ನೂ ವಿಜಯಪುರದಿಂದ ಬಾಗಲಕೋಟೆವರೆಗೆ ಈಶ್ವರಪ್ಪ ಜೊತೆಗೆ ಪ್ರಯಾಣ ಮಾಡಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ಮಾಡಿದೆವು, ಜೊತೆಗೆ ಮುಂಬರುವ ಚುನಾವಣೆಯನ್ನು ನಾವು ಎಲ್ಲರೂ ಒಟ್ಟಾಗಿ ಎದುರಿಸುವ ಬಗ್ಗೆ, ಹೆಚ್ಚಿನ ಸಂಖ್ಯೆಯಲ್ಲಿ ಸೀಟ್ ತರುವ ಬಗ್ಗೆ ಚರ್ಚೆ ಮಾಡಿದ್ದೇವೆ.

ಜೊತೆಗೆ ಇನ್ನೂ ಮುಂದೆ ಎಲ್ಲರು ಪಕ್ಷ ಕಟ್ಟೋಣ. ಜೊತೆಗೆ ಬಹಿರಂಗವಾಗಿ ಹೇಳಿಕೆ ಕೊಡಬೇಡ ಅಂತ ನನಗೆ ಸಲಹೆ ನೀಡಿದ್ರು. ಇನ್ನೂ ಹಿರಿಯರು ಮಾತಿಗೆ ನಾನು ಒಪ್ಪಿದ್ದೇನೆ. ಜೊತೆಗೆ ಯಡ್ಡಿಯೂರಪ್ಪನವರು ಗೌರವಯುತವಾಗಿ ನಿರ್ಗಮನ ಆಗಿದ್ದಾರೆ. ಇನ್ನೂ ಹೈಕಮಾಂಡ್ ಅವರಿಗೆ ಬಹಳ ಗೌರವ ಕೊಟ್ಟು ಮೋದಿಯವರು, ನಡ್ಡಾ ಅವರು, ಅಮಿತ್ ಶಾ ಅವರು, ಅವರಿಗೆ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಇನ್ನೂ ನೀವು ಸಾಕಷ್ಟು ಕಷ್ಟ ಪಟ್ಟಿದ್ದೀರಿ. ಹಾಗೆಯೇ ಸೈಕಲ್ ತುಳಿದು ಪಕ್ಷ ಕಟ್ಟಿದ್ದೀರಿ. ಜೊತೆಗೆ ಈಗ ನೀವು ಸ್ವಂತ ಹೆಲಿಕಾಪ್ಟರ್ ನಲ್ಲಿ ತಿರುಗಾಡುವಂತಹ ಶಕ್ತಿಯು ನಿಮಗೆ ಬಿಜೆಪಿಯಿಂದ ಸಿಕ್ಕಿದೆ. ಎಂದಿದ್ದಾರೆ

ಇನ್ನೂ BJP ಋಣ ನಿಮ್ಮ ಮೇಲೆ ಬಹಳ ಇದೆ. ಜೊತೆಗೆ ಅದಕ್ಕೆ ನಿಮ್ಮ ನಿವೃತ್ತಿ ಜೀವನಕ್ಕೆ ಒಳ್ಳೆಯದಾಗಲಿ ಎಂದು ಸಂದೇಶದೊಂದಿಗೆ ಸ್ಪಷ್ಟವಾದ ಸಂಕೇತ ಕೊಟ್ಟಿದೆ ಎಂದು ಹೇಳಿದ್ದಾರೆ. ಇನ್ನೂ ಇಂದು ಸಿಎಂ ಬೊಮ್ಮಾಯಿಯವರ ಆಯ್ಕೆ ಯಡ್ಡಿಯೂರಪ್ಪನವರದು. ಜೊತೆಗೆ ಸಿಎಂ ಬೊಮ್ಮಾಯಿಯವರಿಗೂ ಬೆಂಬಲ ಕೊಡಲಿಲ್ಲ ಎಂದರೆ, ಇವರು ಯಾರನ್ನು ಸಹಿಸುವುದಿಲ್ಲ. ಎಂದರ್ಥ ಇನ್ನೂ ಇವರು ಮುಂದೆ ತಮ್ಮ ಮಗನನ್ನೇ ಉತ್ತರಾಧಿಕಾರಿಯಾಗಿ ಮಾಡಲು ಸಿಎಂ ಬೊಮ್ಮಾಯಿಯವರನ್ನು ತಾತ್ಕಾಲಿವಾಗಿ ತಯಾರಿ ಮಾಡಿದ್ದಾರೆ ಎಂಬ ಸಂಶಯ ಬರಲು ಪ್ರಾರಂಭವಾಗುತ್ತೆ. ಎಂದು ಯತ್ನಾಳ ಗುಡುಗಿದ್ದಾರೆ.

ಜೊತೆಗೆ ನಿನ್ನೆ ದೇವೆಗೌಡ್ರು ಸಿಎಂ ಬೊಮ್ಮಾಯಿಯವರ ಸರ್ಕಾರಕ್ಕೆ ಏನಾದ್ರು ತೊಂದರೆ ಆದ್ರೆ, ನಾವು ಕೂಡ ಬೆಂಬಲಕೊಡುತ್ತೇವೆ ಎಂದು ಹೇಳಿದ್ದಾರೆ. ಇನ್ನೂ ಬಿಎಸ್ವೈ ಅವರ ಜೊತೆ ೧೦,೨೦ ಜನರು ಹೋಗುತ್ತೀವಿ ಎಂದರೆ, ಜೆಡಿಎಸ್ ಬೆಂಬಲ ಇದೆ. ಇದು ಕೇಂದ್ರದ ಸೂಚನೆಯ ಮೇರೆಗೆ ಸಿಎಂ ಬೊಮ್ಮಾಯಿ ,ದೇವೆಗೌಡರನ್ನು ಭೇಟಿ ಮಾಡಿದ್ದಾರೆ ಅಂತ ನನಗೆ ಅನಿಸುತ್ತೆ ಎಂದು ಯತ್ನಾಳ ಗುಡುಗಿದ್ದಾರೆ.

error: Content is protected !!