ಹಾಸನ: ಬ್ಯಾಂಕ್ನಲ್ಲಿ ಅಡ ಇಟ್ಟಿದ್ದ ಚಿನ್ನವನ್ನು ಬಿಡಿಸಿಕೊಂಡಾಗ ನಕಲಿ ಬಂಗಾರವನ್ನು ಕೋಟ್ಟಿದ್ದಾರೆಂದು ಆರೋಪಿಸಿ, ಬ್ಯಾಂಕ್ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕಿನ, ಉದಯಪುರದಲ್ಲಿರುವ HDCC ಬ್ಯಾಂಕ್ನಲ್ಲಿ ಜರುಗಿದೆ.
ಹಿರೇಹಳ್ಳಿ ಗ್ರಾಮದ ಜಯಮ್ಮ ಎಂಬುವವರ ಮಾಂಗಲ್ಯ ಸರ ಹಾಗೂ ಒಂದು ಬಂಗಾರದ ಸರವನ್ನು ಬ್ಯಾಂಕ್ನಲ್ಲಿ ೧ ವರ್ಷದ ಹಿಂದೆಯೇ ಅಡವಿಟ್ಟು, ೧ ಲಕ್ಷದ ೧೦ ಸಾವಿರ ರೂಪಾಯಿ ಹಣ ಪಡೆದಿದ್ರು. ಬಂಗಾರ ಅಡವಿಟ್ಟುಕೊಳ್ಳುವ ಮುಂಚೆ ಬ್ಯಾಂಕ್ ನವರು ಬಂಗಾರವನ್ನು ಪರಿಶೀಲನೆ ನಡೆಸಿದ್ರು. ಪರಿಶೀಲನೆ ಬಳಿಕ ಅಸಲಿ ಬಂಗಾರವೆಂದು ಗೊತ್ತಾದ ನಂತರ ಅಡವಿಟ್ಟುಕೊಂಡು ಸಾಲದ ರೂಪದಲ್ಲಿ ಹಣ ನೀಡಿದ್ರು.
ಆದ್ರೆ ತದನಂತರ ಜಯಮ್ಮ ಬ್ಯಾಂಕ್ಗೆ ಹಣ ಕಟ್ಟಿ ತಮ್ಮ ಬಂಗಾರವನ್ನು ಬಿಡಿಸಿಕೊಂಡಿದ್ದಾರೆ. ಆದ್ರೆ ಈಗ ಬ್ಯಾಂಕ್ ನವರು ತಮಗೆ ನಕಲಿ ಬಂಗಾರ ನೀಡಿದ್ದಾರೆ. ಈ ಬಗ್ಗೆ ಕೇಳಿದ್ರೆ ನೀವು ಅಡವಿಟ್ಟ ಚಿನ್ನವೇ ನಕಲಿಯಾಗಿತ್ತು. ಅದನ್ನೇ ನಿಮಗೆ ವಾಪಸ್ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ ಎಂದು ಜಯಮ್ಮ ಆರೋಪ ಮಾಡಿದ್ದಾರೆ.
ಈ ಪರಿಣಾಮದಿಂದ ಆಕ್ರೋಶಗೊಂಡ ಸ್ಥಳೀಯರು ಬ್ಯಾಂಕ್ಗೆ ಮುತ್ತಿಗೆ ಹಾಕಿ, ಬ್ಯಾಂಕಿನ ಗಾಜು ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ನಾವು ಅಸಲಿ ಬಂಗಾರ ಅಡವಿಟ್ಟಿದ್ದೇವೆ. ನೀವು ಪರಿಶೀಲನೆ ನಡೆಸಿದ ಬಳಿಕ ಬಂಗಾರ ಅಡವಿಟ್ಟುಕೊಂಡು ಹಣ ಕೊಟ್ಟಿದ್ದೀರಿ. ನಾವು ಸಾಲ ತೀರಿಸಿದ್ದೇವೆ ದಯವಿಟ್ಟು ನಮ್ಮ ಚಿನ್ನ ನಮಗೆ ನೀಡಿ. ನಿಮ್ಮ ನಕಲಿ ಚಿನ್ನ ನಮಗೆ ಬೇಡ ಎಂದು ಜಯಮ್ಮ ಆಕ್ರೋಶ ವ್ಯಕ್ತಪಡಿಸಿದರು.