ಮುಂಬೈ: ಕಠಿಣ ಪರಿಶ್ರಮ ಹಾಗೂ ಶ್ರದ್ಧೆ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುವುದಕ್ಕೆ ಈ ಕಥೆಯೇ ಸಾಕ್ಷಿ. ತನ್ನ ೨ ಕಣ್ಣುಗಳು ಕಾಣಿಸದಿದ್ರು ವ್ಯಕ್ತಿಯೋರ್ವ ರಸ್ತೆ ಬದಿಯಲ್ಲಿ ಕುಳಿತು ಬಾಳೆಕಾಯಿ ಚಿಪ್ಸ್ ತಯಾರಿಸುತ್ತಿರುವ ವೀಡಿಯೋ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ವ್ಯಕ್ತಿಯೊಂಬ ತನ್ನ ೨ ನೇತ್ರಗಳನ್ನು ಕಳೆದುಕೊಂಡಿದ್ದು, ನಾಸಿನ್ನ ಮಖ್ಮಲಾಬಾದ್ ರಸ್ತೆ ಬದಿಯಲ್ಲಿ ಅಂಗಡಿ ಇಟ್ಟುಕೊಂಡಿರುವುದಾಗಿ ಹೇಳಿದ್ದಾನೆ. ವೀಡಿಯೋದಲ್ಲಿ, ಬಾಳೆಕಾಯಿಯನ್ನು ಸಕ್ರಿಯವಾಗಿ ತುರಿದು ಬಾಣಲಿಗೆ ಬಿಡುತ್ತಾನೆ. ಬಳಿಕ ಬಿಸಿ ಎಣ್ಣೆಯಲ್ಲಿ ಬಾಳೆಕಾಯಿಯನ್ನು ಬೇಯಿಸಿ ದೊಡ್ಡ ಪಾತ್ರೆಗೆ ಹಾಕುತ್ತಾನೆ. ನಂತರ ಅದಕ್ಕೆ ಇನ್ನೊಬ್ಬ ಹುಡುಗ ಮಸಾಲೆಯನ್ನು ಹಾಕಿ ಮಿಶ್ರಣ ಮಾಡಿ, ಪ್ಲಾಸ್ಟಿಕ್ ಕವರ್ನಲ್ಲಿ ಪ್ಯಾಕ್ ಮಾಡುತ್ತಾನೆ.