ಕೂಗು ನಿಮ್ಮದು ಧ್ವನಿ ನಮ್ಮದು

ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ: 4 ಲಕ್ಷ ರೂ.ಮೌಲ್ಯದ ಗಾಂಜಾ ವಶಕ್ಕೆ

ಬಳ್ಳಾರಿ: ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು ಸಿರುಗುಪ್ಪ ತಾಲ್ಲೂಕಿನ ಹಾಳಮುರವಣಿ ಗ್ರಾಮದ ಹೊಲವೊಂದರಲ್ಲಿ ದಾಳಿ ನಡೆಸಿ, ಬೆಳೆದಿದ್ದ 4 ಲಕ್ಷ ರೂ.ಮೌಲ್ಯದ ಗಾಂಜಾ ಬೆಳೆ ವಶಪಡಿಸಿಕೊಂಡಿದೆ. ಸಾಗುವಳಿ ಮಾಡುತ್ತಿದ್ದ ರೈತನ ಮೇಲೆ ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾಳಮುರವಣಿ ಸೀಮೆಯ ಸರ್ವೆ ನಂ-37/ಬಿ/2ರ ಮಾಲೀಕರಾದ ಕಾಳಪ್ಪ ದೊಡ್ಡ ಈರಣ್ಣ ಅವರು ಸಾಗುವಳಿ ಮಾಡುತ್ತಿರುವ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾಗಳು ಒಟ್ಟು 31.700ಕಿ‌.ಗ್ರಾಂ (54 ಗಿಡಗಳು) ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಜಂಟಿ ಆಯುಕ್ತರ, ನಿರ್ದೇಶನದ ಮೇರೆಗೆ ಮತ್ತು ಬಳ್ಳಾರಿ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ

ಅಬಕಾರಿ ಉಪ ಅಧೀಕ್ಷಕ ಬಿ.ಹೆಚ್.ಪೂಜಾರ್ ನೇತೃತ್ವದಲ್ಲಿ ಹಾಗೂ ಸಿರುಗುಪ್ಪ ತಹಶೀಲ್ದಾರ ಕೂಡಲಗಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬೆಳೆದಿದ್ದ ಗಾಂಜಾ‌ ಬೆಳೆ ವಶಪಡಿಸಿಕೊಂಡಿದೆ. ಸಿರುಗುಪ್ಪ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!