2023 ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷವಾಗಿರಲಿದೆ. ಈ ವರ್ಷದ ಆರಂಭದಿಂದಲೇ ನೌಕರರು ತುಟ್ಟಿಭತ್ಯೆ ಹೆಚ್ಚಳದ ಲಾಭ ಪಡೆಯಲಿದ್ದಾರೆ. ಫೆ.1ರಂದು ಮಂಡಿಸಲಿರುವ ಬಜೆಟ್ ನಲ್ಲಿ ಕೇಂದ್ರ ನೌಕರರಿಗೆ ಸರಕಾರದಿಂದ ಎರಡು ಪ್ರಮುಖ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ತುಟ್ಟಿಭತ್ಯೆ ಅಂಕಿ ಅಂಶ ಜನವರಿ 31ರಂದು ಜಾರಿಯಾಗಲಿದೆ. ಇದರಿಂದ ಈ ಬಾರಿ ನೌಕರರ ತುಟ್ಟಿಭತ್ಯೆ ಎಷ್ಟು ಏರಿಕೆಯಾಗಲಿದೆ ಎನ್ನುವುದು ಸ್ಪಷ್ಟವಾಗಲಿದೆ.
ಆಗಲಿದೆ ಎರಡು ಪ್ರಮುಖ ಘೋಷಣೆ :
ಬಜೆಟ್ನಲ್ಲಿ ಉದ್ಯೋಗಿಗಳಿಗೆ ಎರಡು ಪ್ರಮುಖ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ. ಮೊದಲನೆಯ ಘೋಷಣೆಯಿಂದ ಉದ್ಯೋಗಿಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ. ಆದರೆ ಎರಡನೇ ಘೋಷಣೆ ಜೇಬಿನ ಮೇಲೆ ಸ್ವಲ್ಪ ಪರಿಣಾಮ ಬೀರಬಹುದು. ಈ ಎರಡೂ ಘೋಷಣೆಗಳು ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಅನ್ವಯವಾಗಲಿದೆ. ಈ ಬಾರಿ ಕೇಂದ್ರ ನೌಕರರ ವೇತನ ಪರಿಷ್ಕರಣೆ ಮುಂದಿನ ವೇತನ ಆಯೋಗದ ಫಿಟ್ಮೆಂಟ್ ಅಂಶದ ಆಧಾರದ ಮೇಲೆ ನಡೆಯಲಿದೆ.
ಪ್ರತಿ ವರ್ಷ ವೇತನ ಪರಿಷ್ಕರಣೆ :
ಸರ್ಕಾರಿ ನೌಕರರ ವೇತನವನ್ನು 10 ವರ್ಷಕ್ಕೊಮ್ಮೆ ಹೆಚ್ಚಿಸುವ ಬದಲು ಪ್ರತಿ ವರ್ಷ ಹೆಚ್ಚಿಸಬೇಕು. ಇದರಿಂದ ಕೆಳಹಂತದಲ್ಲಿ ಕೆಲಸ ಮಾಡುವ ನೌಕರರು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಸರಿಸಮಾನವಾಗಿ ವೇತನ ಪಡೆಯುವ ಅವಕಾಶ ಸಿಗಲಿದೆ. ಮೂಲಗಳ ಪ್ರಕಾರ, ಹೊಸ ವೇತನ ಆಯೋಗ ರಚನೆಗೂ ಮುನ್ನ ಸರ್ಕಾರವು ನೌಕರರ ವೇತನವನ್ನು ಪರಿಷ್ಕರಿಸಲು ಹೊಸ ಸೂತ್ರವನ್ನು ಪರಿಚಯಿಸಿ, ಅದನ್ನು ಬಜೆಟ್ನಲ್ಲಿಯೂ ಸೇರಿಸಬಹುದು.
ವೇತನ ಹೆಚ್ಚಳಕ್ಕೆ ಹೊಸ ಸೂತ್ರ ಯಾವುದು? :
ಇಲ್ಲಿಯವರೆಗೆ ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸಲಾಗಿದೆ. 2014 ರಲ್ಲಿ, ಏಳನೇ ವೇತನ ಆಯೋಗವನ್ನು ರಚಿಸಲಾಯಿತು. ಇದರಲ್ಲಿ ಫಿಟ್ಮೆಂಟ್ ಅಂಶದ ಆಧಾರದ ಮೇಲೆ ಮೂಲ ವೇತನವನ್ನು ಹೆಚ್ಚಿಸಿ ನೌಕರರ ವೇತನವನ್ನು ಬದಲಾಯಿಸಲಾಯಿತು. ಇದರಿಂದ ಉನ್ನತ ಮಟ್ಟದ ನೌಕರರಿಗೆ ಮಾತ್ರ ಲಾಭವಾಗುತ್ತಿದೆ. ಕೆಳಮಟ್ಟದ ನೌಕರರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯೋಜನವಾಗಿಲ್ಲ. ಹೀಗಿರುವಾಗ ಮಾಜಿ ವಿತ್ತ ದಿವಂಗತ ಅರುಣ್ ಜೇಟ್ಲಿ ನೀಡಿರುವ ಸೂತ್ರದತ್ತ ಸರ್ಕಾರ ಗಮನ ಹರಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಬಜೆಟ್ನಲ್ಲಿ ಆಗಲಿರುವ ಎರಡನೇ ಪ್ರಮುಖ ಘೋಷಣೆ :
ಬಜೆಟ್ನಲ್ಲಿ ಘೋಷಣೆಯಾಗಬಹುದಾದ ಇನ್ನೊಂದು ವಿಚಾರವೆಂದರೆ ಹೌಸ್ ಬಿಲ್ಡಿಂಗ್ ಭತ್ಯೆ. ಪ್ರಸ್ತುತ, ಮನೆ ನಿರ್ಮಿಸಲು ಅಥವಾ ದುರಸ್ತಿ ಮಾಡಲು ಸರ್ಕಾರವು ಮುಂಗಡವಾಗಿ ನೀಡುತ್ತಿರುವ ಹಣದ ಮೇಲಿನ ಬಡ್ಡಿ ದರವು 7.1% ಆಗಿದೆ. ಪ್ರಸ್ತುತ ಉದ್ಯೋಗಿ ಹೌಸ್ ಬಿಲ್ಡಿಂಗ್ ಭತ್ಯೆಯನ್ನು 25 ಲಕ್ಷದವರೆಗೆ ತೆಗೆದುಕೊಳ್ಳಬಹುದಾಗಿದೆ. ಆದರೆ, ಈ ಮೊತ್ತವನ್ನು 30 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ. ಅಲ್ಲದೆ, ಬಡ್ಡಿದರವನ್ನು ಕೂಡಾ 7.1% ರಿಂದ 7.5% ಕ್ಕೆ ಹೆಚ್ಚಿಸಬಹುದು.
ಬಜೆಟ್ ನಂತರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಿಸುವ ನಿರೀಕ್ಷೆ ಇದೆ. ಈ ಬಾರಿ ತುಟ್ಟಿಭತ್ಯೆ ಶೇ.41ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಈ ಹೆಚ್ಚಳ ಜನವರಿ 1ರಿಂದ ಜಾರಿಯಾಗಲಿದೆ.