ನರೇಂದ್ರ ಮೋದಿ ಭೇಟಿ ಬಗ್ಗೆ ಸಂಸದ ಬಿವೈ ರಾಘವೇಂದ್ರ ಮಾಹಿತಿ ಇವತ್ತು 11.30ಕ್ಕೆ ಮೋದಿ ಅವರು ಶಿವಮೊಗ್ಗ ನೂತನ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಶಿವಮೊಗ್ಗ ಟರ್ಮಿನಲ್ನ ವೀಕ್ಷಣೆ ಮಾಡಲಿದ್ದಾರೆ.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಿಎಸ್ವೈ ಮನೆಯಿಂದ ನೇರವಾಗಿ ಶಿವಮೊಗ್ಗ ತಿಲಕ ನಗರದಲ್ಲಿರುವ ರಾಘವೇಂದ್ರ ಮಠಕ್ಕೆ ಭೇಟಿ ನೀಡಲಿದ್ದು ರಾಘವೇಂದ್ರ ಸ್ವಾಮಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಲಿದ್ದಾರೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ