ಕೂಗು ನಿಮ್ಮದು ಧ್ವನಿ ನಮ್ಮದು

ಹೊಸ ಸಿಎಂ ಆಯ್ಕೆಯಲ್ಲಿ ಅಚ್ಚರಿ ಆಯ್ಕೆ ಆಗಬಹುದು!ಸಂಸದ ರಾಘವೇಂದ್ರ

ಬೆಂಗಳೂರು: ಇಲ್ಲಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಮಾತನಾಡಿದ ಬಿ.ಎಸ್‌. ಯಡಿಯೂರಪ್ಪರ ಪುತ್ರ ಸಂಸದ ರಾಘವೇಂದ್ರ. ರಾಜ್ಯದಲ್ಲಿ ಹೊಸ ಸಿಎಂ ಆಯ್ಕೆಯಲ್ಲಿ ಅಚ್ಚರಿ ಆಯ್ಕೆ ಆಗಬಹುದು. ಮಹಾರಾಷ್ಟ್ರ, ಉತ್ತರ ಪ್ರದೇಶ ಮಾದರಿಯಲ್ಲಿ ಫಡ್ನವಿಸ್, ಯೋಗಿ ಮಾದರಿಯಲ್ಲಿ ರಾಜ್ಯದಲ್ಲೂ ಅಚ್ಚರಿ ಆಯ್ಕೆಯಾಗಬಹುದು. ಯಡಿಯೂರಪ್ಪ ಅವರು ಕಳೆದ ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಕ್ಕೆ ಸಂಕಲ್ಪ ಮಾಡಿದ್ದರು.

ಅದರಂತೆ ನಿನ್ನೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಸಚಿವ ಸಂಪುಟದಲ್ಲಿ ಯಡಿಯೂರಪ್ಪನವರ ಪಾತ್ರವೇ ಇಲ್ಲ. ಇನ್ನು ಅವರ ಮಕ್ಕಳ ಪಾತ್ರ ಎಲ್ಲಿಂದ ಬರುತ್ತೆ ಎಂದ ಸಂಸದ ರಾಘವೇಂದ್ರ, ಇನ್ನು ಬಿ.ವೈ.ವಿಜಯೇಂದ್ರ ಬಿಜೆಪಿ ಉಪಾಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಪಕ್ಷದ ಸೇತುವೆಯಾಗಿ ಕೆಲಸ ಮಾಡುತ್ತಾರೆ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.

error: Content is protected !!