ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸಂಪುಟ ರಚನೆ ಕಸರತ್ತು ನಡೆದಿದ್ದು, BJPಯ ೨ ಓ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಸಚಿವರಾಗುವ ಸಾಧ್ಯತೆಗಳಿವೆ ಹೆಚ್ಚಿವೆ ಎನ್ನಲಾಗಿದೆ.
ಇನ್ನೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿರುವ ಮಾಜಿ ಸಿಎಂ ಯಡಿಯೂರಪ್ಪನವರು ರಾಜ್ಯಪಾಲ ಹುದ್ದೆಯನ್ನ ತಿರಸ್ಕರಿಸಿದ್ದಾರೆ. ಜೊತೆಗೆ ಹೈಕಮಾಂಡ್ RSS ಮುಖಂಡರ ಮೂಲಕ ಬಿ.ಎಸ್ ಯಡಿಯೂರಪ್ಪನವರ ಮನವೊಲಿಕೆ ಆಗುತ್ತದೆ ಎನ್ನಲಾಗಿದೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತ್ರ ರಾಜ್ಯದಲ್ಲಿದ್ದು, ಪಕ್ಷ ಸಂಘಟನೆಯನ್ನು ತೊಡಗಿಕೊಳ್ಳುವದಾಗಿ ಹೇಳುತ್ತಿರುವ ಈ ಹಿಂದಿನ ರಹಸ್ಯವು ಇಲ್ಲಿದೆ.
ಇನ್ನೂ ಈಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕಾದ ನಾಯಕರ ಪಟ್ಟಿಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದರು. ಇನ್ನೂ ಇದೇ ಪಟ್ಟಿಯಲ್ಲಿ ಬಿ.ಎಸ್.ವೈ ಪುತ್ರ, ರಾಜ್ಯ BJP ಉಪಾಧ್ಯಕ್ಷ ಆಗಿರುವ ಬಿ.ವೈ ವಿಜಯೇಂದ್ರ ಹೆಸರಿದೆ ಎನ್ನಲಾಗಿದೆ. ಜೊತೆಗೆ ಬಸವರಾಜ್ ಬೊಮ್ಮಾಯಿ ಲಿಸ್ಟ್ ನಲ್ಲಿ ವಿಜಯೇಂದ್ರ ಹೆಸರು ಸೇರಿಸಿದೆ. ಇನ್ನೂ ಬಿ.ಎಸ್.ಯಡಿಯೂರಪ್ಪ ಮೌನದಿಂದ ಸಂಪುಟ ರಚನೆ ಕಗ್ಗಂಟಾಗಿದೆ ಎಂಬ ಚರ್ಚೆಗಳು ಕಮಲ ಪಾಳಯದಲ್ಲಿ ಕೇಳಿ ಬರುತ್ತಿವೆ. ಜೊತೆಗೆ ಕೇಂದ್ರ ಸಂಪುಟದಲ್ಲಿಯೂ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಸ್ಥಾನ ಸಿಗಲಿಲ್ಲ.
ಇನ್ನೂ ಹೀಗಾಗಿ ರಾಜ್ಯದಲ್ಲಿ ಆದರೂ ಮತ್ತೊಬ್ಬ ಪುತ್ರನಿಗೆ ಸಚಿವ ಸ್ಥಾನ ಸಿಗಲಿ ಅನ್ನೋದು ಬಿ.ಎಸ್ ಯಡಿಯೂರಪ್ಪನವರ ಲೆಕ್ಕಾಚಾರ ಎನ್ನಲಾಗುತ್ತದೆ. ಜೊತೆಗೆ ಪುತ್ರರ ಭವಿಷ್ಯಕ್ಕಾಗಿಯೇ ರಾಜ್ಯಪಾಲ ಹುದ್ದೆಯನ್ನು ಬಿಎಸ್ವೈ ತಿರಸ್ಕರಿಸಿದ್ದಾರೆ ಎಂಬ ಮಾತುಗಳು ಎಲ್ಲಡೆ ಕೇಳಿ ಬರುತ್ತಿವೆ. ಜೊತೆಗೆ ಬಿ.ಎಸ್.ಯಡಿಯೂರಪ್ಪನವರು ಗೌರವದ ನಿರ್ಗಮನದ ಬಗ್ಗೆ ಮಾತಾಡುವ ಹೈಕಮಾಂಡ್ ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ ಪಟ್ಟಿಗೆ ಸಮ್ಮತಿ ನೀಡಬೇಕಾ ಅಥವಾ ಬೇಡವೇ ಎನ್ನೋದರ ಬಗ್ಗೆ ಚರ್ಚೆ ನಡೆಸುತ್ತಿದೆ. ಇನ್ನೂ ಸಿಎಂ ಬಸವರಾಜ್ ಬೊಮ್ಮಾಯಿ ಕೊಟ್ಟಿರುವ ಈ ಲಿಸ್ಟ್ ನಲ್ಲಿ ವಿಜಯೇಂದ್ರಗೂ ಮಣೆ ಹಾಕುತ್ತಾ ಅನ್ನೋದು ಇವತ್ತು ಸಂಜೆ ರಿವೀಲ್ ಆಗುವ ಸಾಧ್ಯತೆಗಳಿವೆ.
ಜೊತೆಗೆ ೨-೩ ಬಾರಿಯೂ ಸಚಿವರಾದವರನ್ನು ಮತ್ತು ಇಲಾಖೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸದ ವೀಕ್ ರಿಪೋರ್ಟ್ ಕಾರ್ಡ್ ಹೊಂದಿರೋ ಯಡಿಯೂರಪ್ಪ ಟೀಂ ಮಂತ್ರಿಗಳಿಗೆ ಗೇಟ್ ಪಾಸ್ ಸಿಗುವಂತ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ.