ಬೆಂಗಳೂರು: ಸಚಿವ ವಿ ಸೋಮಣ್ಣ ನಿಸ್ಸಂದೇಹವಾಗಿ ಆಘಾತಕ್ಕೊಳಗಾಗಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಅವರ ಕುಟುಂಬವರು ಕೂಡ ವರಿಷ್ಠರ ತೀರ್ಮಾನದಿಂದ ಕಂಗಾಲಾಗಿದ್ದಾರೆ. ಸೋಮಣ್ಣಗೆ ವರುಣಾ ಹಾಗೂ ಚಾಮರಾಜನಗರದಿಂದ ಟಿಕೆಟ್ ನೀಡಿ ಹೈಕಮಾಂಡ್ ಏನು ಸಾಬೀತು ಮಾಡಲು ನಿರ್ಧರಿಸಿದೆಯೋ? ಸೋಮಣ್ಣ ಬಿಜೆಪಿಗೆ ಬೇಡದ ಕೂಸು ಆಗಿಬಿಟ್ಟರೆ? ಸೋಮಣ್ಣ ಅವರ ಮಾತಿನಲ್ಲಿ ಬೇಸರ ಮತ್ತು ಅಸಮಾಧಾನವನ್ನು ಸ್ಪಷ್ಟವಾಗಿ ಗುರುತಿಸಬಹುದು. ಬಿಎಸ್ ಯಡಿಯೂರಪ್ಪ ಕುಟುಂಬದೊಂದಿಗೆ ಕಟ್ಟಿಕೊಂಡ ವೈರತ್ವ ಸೋಮಣ್ಣಗೆ ದುಬಾರಿಯಾಗಿ ಪರಿಣಮಿಸಿದೆ ಅನ್ನದೆ ವಿಧಿಯಿಲ್ಲ.
ಅಷ್ಟಾಗಿಯೂ ಸೋಮಣ್ಣ ವರಿಷ್ಠರ ತೀರ್ಮಾನವನ್ನು ಸ್ಪೋರ್ಟ್ ಆಗಿ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹೈಕಮಾಂಡ್ ಜೊತೆ ಮಾತಾಡಿ ಗೋವಿಂದರಾಜನಗರದ ಟಿಕೆಟ್ ಅನ್ನು ತಮ್ಮ ಮಗ ಅರುಣ್ ಸೋಮಣ್ಣಗೆ ನೀಡುವಂತೆ ಒತ್ತಾಯಿಸುವುದಾಗಿ ಹೇಳುತ್ತಾರೆ