ಚಿಕ್ಕೋಡಿ: ರೈತನ ಮನ್ಯಾಗ್ ಕೃಷಿ ಸಚಿವ ಬಿ.ಸಿ ಪಾಟೀಲ್ ಮಜ್ಜಿಗೆ ತಯಾರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತಕ್ಷೇತ್ರದಲ್ಲಿ ರೈತರೊಂದಿಗೆ ೧ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಪ್ರವೀಣ ಶಾ ಎಂಬ ರೈತನ ಮನೆಯಲ್ಲಿ ಕಡಗೋಲು ಹಿಡಿದುಕೊಂಡು ನಮ್ಮ ಉತ್ತರ ಕರ್ನಾಟಕದ ಮಂದಿ ಶೈಲಿಯಲ್ಲಿ ಕುಳಿತು ಮೊಸರು ಕಡಿದು ಮಜ್ಜಿಗೆಯನ್ನು ತಯಾರಿಸಿದ್ರು.
ಬಿ.ಸಿ ಪಾಟೀಲ ನಂತರ ಶಶಿಕಲಾ ಜೊಲ್ಲೆ ಮತ್ತು ಅಣ್ಣಾಸಾಹೇಬ್ ಜೊಲ್ಲೆ ಸಹ ಮಜ್ಜಿಗೆ ಕಡೆದಿದ್ದಾರೆ. ಕೊನೆಯಲ್ಲಿ ಮಜ್ಜಿಗೆ ಕುಡಿದು ಬಿ.ಸಿ ಪಾಟೀಲ್ ಬಹಳ ಸಂತೋಷ ಪಟ್ಟರು. ಮುಂಜಾನೆಯಿಂದಲೂ ಬಿ.ಸಿ ಪಾಟೀಲ್ ಮತ್ತು ಶಶಿಕಲಾ ಜೊಲ್ಲೆ ನಿಪ್ಪಾಣಿ ಕ್ಷೇತ್ರದ ರೈತರ ಜಮೀನುಗಳಿಗೆ ಹೋಗಿ ರೈತರು ಅಳವಡಿಸಿಕೊಂಡಿರುವ ವಿಶೇಷ ತಂತ್ರಜ್ಞಾನಗಳನ್ನ ಪರಿಶೀಲಿಸಿ ರೈತರಿಗೆ ಸತ್ಕಾರ ಮಾಡಿದ್ರು. ಈ ಸಂದರ್ಭದಲ್ಲಿ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಹಿರಿಯ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ರು.