ಚಾಮರಾಜನಗರ : ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 2020-21ನೇ ಸಾಲಿನಲ್ಲಿ ರಾಜ್ಯದ 1 ಲಕ್ಷದ 8 ಸಾವಿರದ 605 ಫಲಾನುಭವಿಗಳಿಗೆ 54 ಕೋಟಿ 93 ಲಕ್ಷದ 22 ಸಾವಿರ ರೂಗಳ ಆರ್ಥಿಕ ನೆರವನ್ನು ನೀಡಿದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಚಾಮರಾಜನಗರದಲ್ಲಿ ತಿಳಿಸಿದ್ದಾರೆ. ಜಿಲ್ಲಾಡಳಿತ ಭವನದಲ್ಲಿ ಕೃಷಿ ಅಧಿಕಾರಿಗಳೊಂದಿಗೆ ನಡೆದ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಸಂವಾದ ಕಾರ್ಯಕ್ರಮದ ಸಭೆಯಲ್ಲಿ ಭಾಗವಹಿಸಿ, ಚರ್ಚೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಕೇಂದ್ರ ಸರ್ಕಾರವು ಕೋವಿಡ್ನ ಈ ಸಂಕಷ್ಟ ಸಮಯದಲ್ಲಿ ರೈತ ಫಲಾನುಭವಿಗಳಿಗೆ ನೆರವಾಗುವ ದೃಷ್ಟಿಯಿಂದ 2020-21ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 2020-21ನೇ ಸಾಲಿನಲ್ಲಿ ರಾಜ್ಯದ 1 ಲಕ್ಷದ 8 ಸಾವಿರದ 605 ಫಲಾನುಭವಿಗಳಿಗೆ 54 ಕೋಟಿ 93 ಲಕ್ಷದ 22 ಸಾವಿರ ರೋಗಳ ಆರ್ಥಿಕ ನೆರವನ್ನು ನೀಡಿದೆ. ಹಾಗೆಯೇ ರಾಜ್ಯ ಸರ್ಕಾರವು ಕೂಡ ಕೋವಿಡ್ನ ಈ ಸಂಕಷ್ಟ ಸಮಯದಲ್ಲಿ ಕೇಂದ್ರ ಸರ್ಕಾರದ ಜೊತೆ ಕೈಜೋಡಿಸಿ, ರಾಜ್ಯದ 1 ಲಕ್ಷದ 1 ಸಾವಿರದ 908 ರೈತ ಫಲಾನುಭವಿಗಳಿಗೆ, 20 ಕೋಟಿ 38 ಲಕ್ಷ 16 ಸಾವಿರ ರೂಗಳ ಆರ್ಥಿಕ ನೆರವು ನೀಡಿದೆ ಎಂದರು.
ರಾಜ್ಯ ಸರ್ಕಾರವು ಮುಂಗಾರು ಹಂಗಾಮಿನ ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾದ ರಸಗೊಬ್ಬರ. ಬಿತ್ತನೆ ಬೀಜ. ಕೃಷಿ ಯಂತ್ರೊಪಕರಣಗಳು. ಲಘು ನೀರಾವರಿ ಘಟಕಗಳ ವಿತರಣೆ. ಕೃಷಿ ಯಂತ್ರಧಾರೆ ಕೇಂದ್ರಗಳ ಸ್ಥಾಪನೆ. ಕೃಷಿ ಯಂತ್ರೊಪಕರಣಗಳ ಬ್ಯಾಂಕುಗಳ ಸ್ಥಾಪನೆ. ಉದ್ಯೋಗ ಖಾತ್ರಿ ಯೋಜನೆಯಡಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳ ಕ್ರಮ ಕೈಗೊಂಡಿದ್ದು, ಹಲವಾರು ಯೋಜನೆಗಳಿಗೆ ಈಗಾಗಲೇ ನೆರವು ನೀಡಿದೆ. ಇವುಗಳಲ್ಲಿ ಕೆಲವೊಂದು ಯೋಜನೆಗಳಿಗೆ ಸಬ್ಸಿಡಿ ರೂಪದಲ್ಲಿ ಸಹಾಯಧನ ನೀಡಲಾಗುತ್ತಿದೆ ಎಂದ ಅವರು ಚಾಮರಾಜನಗರ ಜಿಲ್ಲೆಯಲ್ಲಿ ರೈತ ಸಂಘಟನೆಗಳ ಮನವಿಯಂತೆ 2016-17ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಎಸ್ಕ್ರೋ ಅಕೌಂಟ್ ಮೂಲಕ 27,210 ಮಂದಿ ರೈತರಿಗೆ 12 ಕೋಟಿ 83 ಲಕ್ಷದ 83 ಸಾವಿರದ ವಿಮಾ ಮೊತ್ತವನ್ನು ಅವರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿರುತ್ತದೆ. ಹಾಗೆ 2021-21ನೇ ಸಾಲಿನಲ್ಲಿ ಜಿಲ್ಲೆಯ 15,076 ರೈತ ಫಲಾನುಭವಿಗಳಿಗೆ 167 ಲಕ್ಷರು ವೆಚ್ಚದ ಟಾರ್ಪಾಲಿನ್ಗಳ ವಿತರಣೆ ಮಾಡಲಾಗಿದೆ. ಹೈಟೆಕ್ ಕೃಷಿ ಯಂತ್ರೊಪಕರಣಗಳ ವಿತರಣೆಯಲ್ಲಿ 4 ಸಾವಿರದ 6 ಫಲಾನುಭವಿ ಗಳನ್ನು ಗುರುತಿಸಿ 533 ಲಕ್ಷ ನೆರವು ನೀಡಿದೆ. ಲಘು ನೀರಾವರಿ ಘಟಕಗಳ ವಿತರಣೆಯಲ್ಲಿ 6,916 ರೈತ ಫಲಾನುಭವಿಗಳನ್ನು ಗುರುತಿಸಿ 10 ಕೋಟಿ 53 ಲಕ್ಷ ಆರ್ಥಿಕ ನೆರವು ನೀಡಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಕೃಷಿ ಸಚಿವರು ಜಿಲ್ಲಾಡಳಿತ ಭವನದ ಮುಂಭಾಗ ಸಮಗ್ರ ಕೃಷಿ ಅಭಿಯಾನ ಜಾಗೃತಿ ಆಂದೋಲನದ ಪ್ರಚಾರದ ಅರಿವು ಮೂಡಿಸುವ ವಾಹನಗಳಿಗೆ ಚಾಲನೆ ನೀಡಿದರು. ನಂತರ ಜಿಲ್ಲಾಡಳಿತದ ಕಚೇರಿಯಲ್ಲಿ ಕೃಷಿ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು.