ಕೂಗು ನಿಮ್ಮದು ಧ್ವನಿ ನಮ್ಮದು

ಮುಂದಿನ 29 ದಿನಗಳವರೆಗೆ ಈ ರಾಶಿಯವರಿಗೆ ಸಿಗುತ್ತೆ ಅಪಾರ ಹಣ, ಕೀರ್ತಿ, ಪ್ರಗತಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಪತ್ತು-ಐಷಾರಾಮಿ, ಪ್ರೀತಿ, ಆಕರ್ಷಣೆ, ಪ್ರಣಯದ ಅಂಶವಾಗಿರುವ ಶುಕ್ರನು ವ್ಯಕ್ತಿಯ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ಬಹಳಷ್ಟು ಸಂಪತ್ತು ಮತ್ತು ವೈಭವವನ್ನು ನೀಡುತ್ತಾನೆ. ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಶುಕ್ರನು ಇತ್ತೀಚೆಗೆ ಮೇ 30 ರಂದು ರಾಶಿ ಪರಿವರ್ತನೆ ಹೊಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದಾನೆ.

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಮುಂದಿನ 29 ದಿನಗಳವರೆಗೆ ಎಂದರೆ ಜುಲೈ 7, 2023 ರವರೆಗೆ ಶುಕ್ರನು ಕರ್ಕಾಟಕ ರಾಶಿಯಲ್ಲಿಯೇ ಸಂಚರಿಸಲಿದ್ದಾನೆ. ಶುಕ್ರನ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ. ಆದಾಗ್ಯೂ, ಈ ಸಮಯವು ಮೂರು ರಾಶಿಯವರಿಗೆ ಅಪಾರ ಹಣ, ಕೀರ್ತಿ, ಪ್ರಗತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.

ಕರ್ಕಾಟಕ ರಾಶಿಯಲ್ಲಿ ಶುಕ್ರನ ಪ್ರವೇಶ: ಜುಲೈ 7 ರವರೆಗೆ ಈ ರಾಶಿಯವರಿಗೆ ಬಂಪರ್ ಲಾಭ:
ಮೇಷ ರಾಶಿ:
ಶುಕ್ರ ರಾಶಿ ಪರಿವರ್ತನೆಯು ಮೇಷ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಬಂಪರ್ ಲಾಭವನ್ನು ನೀಡಲಿದೆ. ಮಾತ್ರವಲ್ಲದೆ, ಇವರ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದ್ದು ದೊಡ್ಡ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯೂ ಇದೆ. ಉದ್ಯೋಗಸ್ಥರಿಗೆ ನಿಮ್ಮ ಪರಿಶ್ರಮ ಮೇಲಾಧಿಕಾರಿಗಳ ಗಮನಕ್ಕೆ ಬರಲಿದ್ದು ಇದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.

ಮಿಥುನ ರಾಶಿ:
ಸಂಪತ್ತು-ಐಷಾರಾಮಿ ಜೀವನದ ಅಂಶವಾಗಿರುವ ಶುಕ್ರ ಸಂಚಾರವು ಮಿಥುನ ರಾಹಿಯವರ ಜೀವನದಲ್ಲಿಯೂ ಮಂಗಳಕರ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಸಂಪತ್ತು ಹೆಚ್ಚಾಗಲಿದ್ದು ವಿದೇಶ ಪ್ರವಾಸಕ್ಕೆ ಹೋಗುವ ಅವಕಾಶವೂ ಲಭ್ಯವಾಗಲಿದೆ. ಹಣದ ಹರಿವು ಹೆಚ್ಚಾಗುವುದರಿಂದ ನೀವು ನಿಮಗೆ ಅಗತ್ಯವಿರುವ ಸೌಕರ್ಯಗಳನ್ನು ಸಹ ಪಡೆದು ಸುಖ-ಸಂತೋಷದ ಜೀವನವನ್ನು ಅನುಭವಿಸುವಿರಿ.

ಮೀನ ರಾಶಿ:
ಶುಕ್ರನ ರಾಶಿ ಪರಿವರ್ತನೆಯು ಮೀನಾ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ದೊಡ್ಡ ಆರ್ಡರ್ ಕೈ ಸೇರುವ ಸಾಧ್ಯತೆ ಇದ್ದು ಹಠಾತ್ ಧನಲಾಭವಾಗಲಿದೆ. ಉದ್ಯೋಗಸ್ಥರಿಗೆ ಪ್ರಾಮೋಷನ್ ಸಿಗುವ ಸಾಧ್ಯತೆ ಇದ್ದರೆ, ಕಲೆ, ನಟನೆಯಂತಹ ಕಲಾತ್ಮಕ ಜೀವನದಲ್ಲಿ ಇರುವವರಿಗೆ ನಿಮ್ಮ ಕನಸಿನ ಅವಕಾಶಗಳು ದೊರೆತು ಅಪಾರ ಕೀರ್ತಿ, ಯಶಸ್ಸಿನ ಜೊತೆಗೆ ಕೈತುಂಬಾ ಹಣವನ್ನು ಕೂಡ ಸಂಪಾದಿಸುವಿರಿ.

error: Content is protected !!