ಗ್ರಹಗಳ ರಾಜ ಸೂರ್ಯ ದೇವನು ಇನ್ನೊಂದು ವಾರದಲ್ಲಿ ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಸೂರ್ಯ ರಾಶಿ ಪರಿವರ್ತನೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯದಲ್ಲಿ 5 ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ.
ಮಿಥುನ ರಾಶಿಗೆ ಪ್ರವೇಶಿಸಲಿರುವ ಸೂರ್ಯನು ಈ ರಾಶಿಯವರಿಗೆ ಮಂಗಳಕರ ಫಲಗಳನ್ನೇ ನೀಡಲಿದ್ದಾನೆ. ಈ ವೇಳೆ ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕಾಮಗಾರಿಗಳು ವೇಗ ಪಡೆಯಲಿದ್ದು ಆದಾಯವೂ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಾಧ್ಯತೆ ಇದ್ದು, ವ್ಯವಹಾರ ಮಾಡುವವರಿಗೆ ಲಾಭದ ಮುನ್ಸೂಚನೆಗಳಿವೆ.
ಸಿಂಹ ರಾಶಿಯ ಅಧಿಪತಿಯಾಗಿರುವ ಸೂರ್ಯನ ಸಂಚಾರವು ಈ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು, ಹಣವನ್ನು ಗಳಿಸುವಲ್ಲಿ ಮತ್ತು ಆರ್ಥಿಕ ಭಾಗವನ್ನು ಬಲಪಡಿಸುವಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದ್ದಾನೆ.
ಸೂರ್ಯ ರಾಶಿ ಪರಿವರ್ತನೆಯೊಂದಿಗೆ ಈ ರಾಶಿಯ ಜನರ ಅದೃಷ್ಟವೂ ಸೂರ್ಯನಂತೆಯೇ ಕಂಗೊಳಿಸಲಿದೆ. ಈ ಸಂದರ್ಭದಲ್ಲಿ ವೃತ್ತಿ ಬದುಕಿನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಇವರು, ಯಾವುದೇ ಕೆಲಸದಲ್ಲೂ ಅಪಾರ ಯಶಸ್ಸನ್ನು ಗಳಿಸುವರು. ಇದರೊಂದಿಗೆ ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ.
ಮಿಥುನ ರಾಶಿಗೆ ಪ್ರವೇಶಿಸಲಿರುವ ಸೂರ್ಯನು ಮಕರ ರಾಶಿಯವರಿಗೆ ಬಂಪರ್ ಆರ್ಥಿಕ ಪ್ರಯೋಜನವನ್ನು ನೀಡಲಿದ್ದಾನೆ. ಇಡಂರಿಂದ ನೀವು ಸಾಲದಿಂದ ಮುಕ್ತಿ ಪಡೆಯುವುದರ ಜೊತೆಗೆ ಹಣವನ್ನೂ ಕೂಡಿಡುವಿರಿ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಗಳು ದೊರೆಯುವ ಸಾಧ್ಯತೆ ಇದೆ.
ಜೂನ್ ಮಾಸದಲ್ಲಿ ಸೂರ್ಯನ ಸಂಚಾರ ಬದಲಾವನೆಯು ಈ ರಾಶಿಯವರಿಗೆ ವರದಾನವಿದ್ದಂತೆ ಎಂದು ಬಣ್ಣಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕುಂಭ ರಾಶಿಯವರಿಗೆ ಕೌಟುಂಬಿಕ ಸಂತೋಷ ವೃದ್ಧಿಯಾಗಲಿದೆ. ಉದ್ಯೋಗಸ್ಥರಿಗೆ ವಿದೇಶ ಪ್ರಯಾಣ ಯೋಗವೂ ಇದೆ.