ಶುಕ್ರನ ಸಂಕ್ರಮಣವು 3 ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. ಜುಲೈ 7, 2023 ರವರೆಗೆ ಶುಕ್ರನು ಕರ್ಕಾಟಕದಲ್ಲಿಯೇ ಇರುತ್ತಾನೆ. ಇದು ಮೂರು ರಾಶಿಯವರ ಅದೃಷ್ಟವನ್ನು ಬೆಳಗುವಂತೆ ಮಾಡುತ್ತದೆ. ಶುಕ್ರನ ಸಂಕ್ರಮಣದಿಂದಾಗಿ, ಮುಂದಿನ 37 ದಿನಗಳು ಈ ರಾಶಿಯವರ ಇಚ್ಛೆ ಈಡೇರುವುದು
ಮೇಷ ರಾಶಿ : ಮೇಷ ರಾಶಿಯವರಿಗೆ ಶುಕ್ರ ಸಂಕ್ರಮಣ ಶುಭಕರವಾಗಿರುತ್ತದೆ. ಈ ರಾಶಿಯವರು ಹೊಸ ಮನೆ-ಕಾರು, ಜೀವನದಲ್ಲಿ ಸೌಕರ್ಯಗಳನ್ನು ಪಡೆಯಬಹುದು. ಕಠಿಣ ಪರಿಶ್ರಮದ ಫಲ ಈ ಸಮಯದಲ್ಲಿ ಪ್ರಾಪ್ತಿಯಾಗುವುದು. ವೃತ್ತಿಜೀವನ ಉತ್ತಮವಾಗಿರಲಿದೆ. ಪ್ರೇಮ ಜೀವನ – ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಮನೆಯ ದೇವರ ಕೋಣೆಯಲ್ಲಿ ಕರ್ಪೂರವನ್ನು ಬೆಳಗುವುದರಿಂದ ಅನೇಕ ಲಾಭಗಳಾಗುವುದು
ಮಿಥುನ ರಾಶಿ : ಶುಕ್ರನ ರಾಶಿ ಬದಲಾವಣೆಯು ಮಿಥುನ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ದಿಢೀರ್ ಹಣಕಾಸಿನ ಲಾಭವಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಆದಾಯ ಹೆಚ್ಚಾಗುತ್ತದೆ. ವ್ಯಾಪಾರಿಗಳಿಗೆ ಕೂಡಾ ಪ್ರತಿ ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗಲಿದೆ. ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಬೆಳಗಿಸುವುದರಿಂದ ಲಾಭ ಹೆಚ್ಚಾಗುತ್ತದೆ.
ಮೀನ ರಾಶಿ : ಶುಕ್ರನ ಸಂಕ್ರಮಣವು ಮೀನ ರಾಶಿಯವರ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಹೆಜ್ಜೆ ಹೆಜ್ಜೆಯಲ್ಲಿಯೂ ಪ್ರಗತಿ, ಸಮೃದ್ದಿ ನಿಮ್ಮದಾಗುವುದು. ಪ್ರಗತಿಯ ಹಾದಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರೇಮ ಜೀವನ ಚೆನ್ನಾಗಿರುತ್ತದೆ. ಆದಾಯ ಹೆಚ್ಚಲಿದೆ. ಎಲ್ಲಿಂದಲಾದರೂ ಇದ್ದಕ್ಕಿದ್ದಂತೆ ಹಣ ಸಿಗುತ್ತದೆ. ಕುಟುಂಬದಲ್ಲಿ ಪ್ರೀತಿ ಹೆಚ್ಚಾಗುತ್ತದೆ.