ಬೆಳಗಾವಿ: ಬೆಳಗಾವಿ ಸಿಇಎನ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬ್ಲ್ಯಾಕ್ ಫಂಗಸ್ ಔಷಧವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದವರನ್ನ ಹೆಡೆಮುರಿ ಕಟ್ಡಿದ್ದಾರೆ. ಬೆಳಗಾವಿ ಸಿಇಎನ್ ಠಾಣೆಯ ಇನ್ಸ್ ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದಲ್ಲಿ ಸಿಇಎನ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬ್ಲ್ಯಾಕ್ ಪಂಗಸ್ ಔಷಧ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಬ್ಲಾಕ್ ಫಂಗಸ್ ಕಾಯಿಲೆಗೆ ನೀಡುವ ಔಷಧವನ್ನು ಕಾಳ ಸಂತೆಯಲ್ಲಿ ನಿಗಧಿತ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡುತ್ತಿದ್ದ ಆರೋಪಗಳನ್ನು ಬಾಗಲಕೋಟೆ ಜಿಲ್ಲೆಯ ಮುಧೋಳದ ತಯ್ಯಬ್ ನಯೂಬ್ ಮನಿಯಾರ (21) ಹಾಗೂ ಮುಜಪರ್ ಅರೀಫ್ ಪಠಾಣ (22) ಎಂದು ಗುರುತಿಸಲಾಗಿದೆ. ಬ್ಲ್ಯಾಕ್ ಪಂಗಸ್ ರೋಗಕ್ಕೆ ನೀಡುವ ಅಂಪೋಟೆರಿಸಿನ್ -ಬಿ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಖದಿಮರು. ಇಂಜೆಕ್ಷನ್ ಮೂಲ ಬೆಲೆ 310 ರೂಪಾಯಿ ಇದ್ದರೂ ಅದನ್ನು ಕಾಳ ಸಂತೆಯಲ್ಲಿ 3 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು.
ಸಧ್ಯ ಖಚಿತ ಮಾಹಿತಿ ಪಡೆದ ಇನ್ಸ್ ಪೆಕ್ಟರ್ ಬಿ.ಆರ್.ಗಡ್ಡೇಕರ್ ಮತ್ತು ತಂಡ ಬಂಧಿತರಿಂದ ಐವತ್ತು ಸಾವಿರ ಮೌಲ್ಯದ ಅಂಪೋಟೆರಿಸಿನ್ -ಬಿ ಇಂಜೆಕ್ಷನ್ ನ 28 ವಾಯಲ್, ಎರಡು ಮೊಬೈಲ್ ಪೋನ್, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚನ ತನಿಖೆ ಮುಂದುವರೆದಿದೆ.