ಮಡಿಕೇರಿ: ಪಕ್ಕದ ಕೇರಳ ರಾಜ್ಯದಲ್ಲಿ ಕೋರೊನಾ ಸೊಂಕು ಬಹಳ ಅಬ್ಬರಿಸುತ್ತಿರುವಾಗಲೇ ಕೊಡಗಿನ ನೆಲ್ಯಹುದಿಕೇರಿಯಲ್ಲಿ ಕೋವಿಡ್ ಸೊಂಕು ಸ್ಫೋಟವಾಗಿದೆ. ೩ ದಿನಗಳಲ್ಲಿ ೭೨ ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಜೊತೆಗೆ ಸೋಂಕು ಸ್ಫೋಟಗೊಳ್ಳುತ್ತಿದ್ದಂತೆ ನೆಲ್ಯಹುದಿಕೇರಿಯ ಜನರು ಕೋವಿಡ್ ಲಸಿಕೆ ಪಡೆಯಲು ಮುಗಿ ಬೀಳುತ್ತಿದ್ದಾರೆ. ಇನ್ನೂ ಇಲ್ಲಿಯ ಸರ್ಕಾರಿ ಶಾಲೆಯಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದ್ದು ಮುಂಜಾನೆ ೬ ಗಂಟೆಯಿಂದಲೇ ಲಸಿಕೆಗಾಗಿ ಜನರು ಒಬ್ಬರ ಮೇಲೊಬ್ರು ಮುಗಿಬೀಳುತ್ತಿದ್ದಾರೆ. ಇನ್ನೂ ಈ ಗ್ರಾಮದೊಂದಿಗೆ ಕೇರಳಿಗರ ಸಂಪರ್ಕವು ಹೆಚ್ಚಾಗಿ ಇರುವುದರಿಂದ ಕೋರೊನಾ ಇಲ್ಲಿ ಈ ರೀತಿ ಸ್ಫೋಟಗೊಳ್ಳಲು ಕಾರಣ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಹೇಳಿದ್ರು.
ಇನ್ನೂ ಯಾರ್ಗೆ ಕೋರೊನಾ ಸೋಂಕು ದೃಢ ಪಟ್ಟರು ತಕ್ಷಣವೇ ಅವರನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿ ಎಂದು ಈಗಾಗಲೇ ತಹಶೀಲ್ದಾರ್ ಹಾಗೂ T.H.O ಅವರಿಗೆ ಸೂಚಿಸಿದ್ದೇನೆ, ಎಂದು ಅಪ್ಪಚ್ಚು ರಂಜನ್ ಅವರು ಹೇಳಿದ್ದಾರೆ. ಇನ್ನೂ ಈ ಗ್ರಾಮದಲ್ಲಿ ಜನಸಂಖ್ಯೆ ಸ್ವಲ್ಪ ಜಾಸ್ತಿಯಿದೆ. ಆದರೂ ಸಹ ಇಲ್ಲಿಗೆ ದಿನ ನಿತ್ಯವೂ ಕೇವಲ ೧೦೦ ಡೋಸ್ ವ್ಯಾಕ್ಸಿನ್ ಪೂರೈಕೆ ಆಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಈ ಕೂಡಲೇ ಹೆಚ್ಚಿನ ಪ್ರಮಾಣದಲ್ಲಿ ಸ್ವ್ಯಾಬ್ ಟೆಸ್ಟ್ ಮಾಡುವುದರ ಜೊತೆಗೆ ವ್ಯಾಕ್ಸಿನ್ ವಿತರಣೆ ಆಗಬೇಕು ಎಂದು ಅಪ್ಪಚ್ಚು ರಂಜನ್ ಅವರು ಆಗ್ರಹಿಸಿದ್ರು.