ನೀತಿ ಸಂಹಿತೆ ಜಾರಿಗೂ ಮುನ್ನ ಮಾರ್ಚ್ 29 ರಂದು ಕಾಣಿಕೆ ಪೆಟ್ಟಿಗೆ ಎಣಿಕೆ ಕಾರ್ಯ ನಡೆಸಲಾಗಿತ್ತು. ಆಗ 10.64 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಎರಡು ತಿಂಗಳ ಬಳಿ ಗುರುವಾರ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮ ಜನಿಸಿದ ಸ್ಥಳ ಅಂಜನಾದ್ರಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಅಂಜನಾದ್ರಿ ದೇಗುಲದ ಹುಂಡಿಯಲ್ಲಿ ಬರೋಬ್ಬರಿ 28,79,910 ರೂ ಸಂಗ್ರಹವಾಗಿದೆ. ಅಂಜನಾದ್ರಿ ದೇಗುಲದ ಹುಂಡಿಯಲ್ಲಿ 4 ವಿದೇಶಿ ನಾಣ್ಯ ಕೂಡ ಸಂಗ್ರಹವಾಗಿದೆ. ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಏಣಿಕೆ ಕಾರ್ಯ ನಡೆಯಿತು.
ಎರಡು ತಿಂಗಳ ಬಳಿಕ ಹುಂಡಿ ಏಣಿಕೆ ಮಾಡಲಾಗಿದೆ. ಗುರುವಾರ ತಹಶೀಲ್ದಾರ್ ಹಾಗೂ ದೇಗುಲದ ಆಡಳಿತ ಮಂಡಳಿ ಕಾರ್ಯದರ್ಶಿ ಮಂಜುನಾಥ ಭೋಗಾವತಿ ನೇತೃತ್ವದಲ್ಲಿ ಹಣ ಎಣಿಕೆ ಕಾರ್ಯ ನಡೆಯಿತು. ಕಳೆದ 55 ದಿನಗಳಲ್ಲಿ 28.79 ಲಕ್ಷ ಹಣ ಸಂಗ್ರಹವಾಗಿದ್ದು, ಬ್ರೆಜಿಲ್, ನೇಪಾಳ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸಿಂಗಾಪುರದ ನಾಣ್ಯಗಳು ಹುಂಡಿಯಲ್ಲಿದ್ದವು. ಸಂಪೂರ್ಣ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿಟಿವಿ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ನಡೆಯಿತು. ಇನ್ನು ಕಳೆದ ಆರು ತಿಂಗಳಿಂದ ಅಂಜನಾದ್ರಿ ದೇಗುಲದ ಆದಾಯ ನಿಧಾನವಾಗಿ ಕುಸಿಯುತ್ತಿದೆ ಎಂದು ತಿಳಿದುಬಂದಿದೆ.
ನೀತಿ ಸಂಹಿತೆ ಜಾರಿಗೂ ಮುನ್ನ ಮಾರ್ಚ್ 29 ರಂದು ಕಾಣಿಕೆ ಪೆಟ್ಟಿಗೆ ಎಣಿಕೆ ಕಾರ್ಯ ನಡೆಸಲಾಗಿತ್ತು. ಆಗ 10.64 ಲಕ್ಷ ರೂಪಾಯಿ ಸಂಗ್ರಹವಾಗಿತ್ತು.