ಕೂಗು ನಿಮ್ಮದು ಧ್ವನಿ ನಮ್ಮದು

ದೇವರ ಮೂರ್ತಿಗಾಗಿ ಬಡಿಗೆ ಬಡಿದಾಟದ ಜಾತ್ರೆ: ರಕ್ತಪಾತವಾದ್ರೂ, ಕೇಸ್ ಇಲ್ಲಾ, ಸತ್ರು ಯಾರೂ ಕೇಳೋದಿಲ್ಲಾ.

ಬಳ್ಳಾರಿ: ಆಂಧ್ರಪ್ರದೇಶದ ಗಡಿಭಾಗದ ಮಾಳ ಮಲ್ಲೇಶ್ವರ ದೇವಾಲಯದಲ್ಲಿ ಪ್ರತಿಬಾರಿಯೂ ಬಡಿಗೆ ಬಡಿದಾಟ ನಡೆಯುತ್ತದೆ. ಈ ಬಾರಿ ಕೊರೊನಾ ನಿಷೇಧದ ಮಧ್ಯೆಯೂ ಅದ್ಧೂರಿಯಾಗಿ ಬಡಿಗೆ ಬಡಿದಾಟದ ಜಾತ್ರೆ ನಡೆದಿದೆ. ಕೊರೋನಾ ಹಿನ್ನಲೆ ಆಂಧ್ರ ಸರ್ಕಾರ ಹೆಚ್ಚು ಜನರು ಸೇರಿ ಬಡಿಗೆ ಜಾತ್ರೆ ಮಾಡದಂತೆ ಎಚ್ಚರಿಸಿತ್ತು. ಕೊರೋನಾಗೆ ಡೋಂಟ್ ಕೇರ್ ಎಂದ ಜನ ಅದ್ಧೂರಿಯಾಗಿ ಜಾತ್ರೆ ಮಾಡಿ ಬಡಿದಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಜಾತ್ರೆ ಹಬ್ಬ ಹರಿದಿನಗಳು ಅಂದ್ರೇ, ದೇವರ ಪೂಜೆ ಪುನಸ್ಕಾರ ಮಾಡಿ ಸಂಭ್ರಮಾಚರಣೆ ಮಾಡ್ತಾರೆ. ಆದ್ರೇ ಈ ಜಾತ್ರೆಯಲ್ಲಿ ದೇವರ ಮೂರ್ತಿಗಾಗಿ ಜನರು ಬಡಿದಾಡಿಕೊಳ್ಳುತ್ತಾರೆ. ಅದು ಕೂಡ ದೇವರಿಗಾಗಿ ಎನ್ನುವದು ವಿಶೇಷವಾಗಿದೆ. ದಶಕಗಳಿಂದಲೂ ನಡೆದ ಈ ಜಾತ್ರೆಗೆ ಇದೀಗ ಕೊರೋನಾ ಹಿನ್ನಲೆ ನಿಷೇಧ ಹೇರಲಾಗಿತ್ತು. ಆಂಧ್ರದ ಗಡಿಭಾಗದ ಮಾಳ ಮಲ್ಲೇಶ್ವರ ದೇವಸ್ಥಾನದಲ್ಲಿ ದಸರಾ ಹಬ್ಬದಲ್ಲಿ ವಿಶೇಷ ಆಚರಣೆಯ ಸಮಯದಲ್ಲಿ ಈ ಆಚರಣೆ ರಕ್ತ ಚರಿತ್ರೆಯನ್ನೇ ಬರೆಯುತ್ತದೆ.

ಇಲ್ಲಿ ದೇವರ ಮೂರ್ತಿಗಾಗಿ ಬಡಿಗೆ ಬಡಿದಾಡ ನಡೆಯುತ್ತದೆ, ರಕ್ತಪಾತವಾದ್ರೂ, ಕೇಸ್ ಇಲ್ಲಾ, ಬಡಿದಾಟದಲ್ಲಿ ಯಾರೂ ಸತ್ರು ಯಾರೂ ಸಹ ಕೇಳೋದಿಲ್ಲಾ..!

ದಸರಾ ಹಬ್ಬದ ದಿನ ಪೂಜೆ ಬಳಿಕ ರಾತ್ರಿ ಉತ್ಸವ ಮೂರ್ತಿ ಯನ್ನು ಹೊರಗೆ ತರಲಾಗುತ್ತದೆ. ಆಗ ಅರಕೇರ ಮತ್ತು ನೇರಣಿಕಿ ಗ್ರಾಮಸ್ಥರು ದೇವರ ಉತ್ಸವ ಮೂರ್ತಿಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗ ಬೇಕೆಂದು ಬಡಿಗೆ ಹಿಡಿದು ಬಡಿದಾಡಿಕೊಳ್ಳುತ್ತಾರೆ.
ಯಾರು ದೇವರ ಮೂರ್ತಿ ಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗ್ತಾರೋ ಆ ಊರಿಗೆ ಒಳ್ಳೆಯದಾಗ್ತದೆ ಎನ್ನುವ ನಂಬಿಕೆ ಇದೆ. ರಾತ್ರಿ 1 ಗಂಟೆ ಯಿಂದ ಬೆಳಿಗ್ಗೆ ನಾಲ್ಕು ಗಂಟೆಯವರೆಗೂ ನಡೆಯೋ ಜಾತ್ರೆ ನೋಡಲು ಮತ್ತು ಬಡಿದಾಡಿಕೊಳ್ಳಲು ಸಾವಿರಾರು ಭಕ್ತರು ಬರುತ್ತಾರೆ. ಬಡಿದಾಟದಲ್ಲಿ ಈ ಬಾರಿಯೂ ಹಲವರಿಗೆ ಗಾಯಗಳಾಗಿದೆ. ಜನರ ಆಚರಣೆ ಮಧ್ಯೆ ಪೊಲೀಸರು ಮೂಕ ಪ್ರೇಕ್ಷಕರಾದ್ರು. ಇನ್ನೂ ಈ ವೇಳೆ ಗೊರವಯ್ಯ ಕಾರ್ಣಿಕ ಕೂಡ ಹೇಳಿದ್ದು,

ಶಿವ ಪಾರ್ವತಿ ದೇಶ ಸಂಚಾರ ಮಾಡ್ಯಾರ ಐದು ಸಾವಿರದ ಒಂದು ನೂರು ನಗಹಳ್ಳಿ, ಒಂದು ಸಾವಿರದ ಒಂಬೈ ನೂರು ಒಕ್ಕಳು ಜ್ಯೋಳ, ಮೂರು ಆರು, ಆರು‌ ಮೂರು ಆದಿತಲೇ ಪರಾಕ್. ಎಂದು ಭವಿಷ್ಯವಾಣಿಯೂ ನುಡಿದಿದ್ದಾರೆ.

error: Content is protected !!