ಬೆಳಗಾವಿ: ಕೊರೊನಾ ಸಂಕಷ್ಟದ ಸಮಯದಲ್ಲಿ ತುರ್ತು ಸೇವೆಗೆ ಜನತೆಗೆ ಸದಾಕಾಲದಲ್ಲಿಯೂ ಅನುಕೂಲವಾಗಲೆಂದು ಎಮ್.ಕೆ.ಕವಟಗಿಮಠ ಟ್ರಸ್ಟ್ ಚಿಕ್ಕೋಡಿ ವತಿಯಿಂದ ಚಿಕ್ಕೋಡಿಯ ಶ್ರೀ ಸಾಯಿ ಸೇವಾ ಪರಿವಾರಕ್ಕೆ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದರು.ಇದು ಹೈಟೆಕ್ ಆಂಬುಲೆನ್ಸ್ ಆಗಿದ್ದು ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಆಂಬುಲೆನ್ಸ್ ಒಳಗಡೆ ಹತ್ತಿ ಪರಿಶೀಲನೆ ನಡೆಸಿ ಆಂಬುಲೆನ್ಸ್ ಹಸ್ತಾಂತರ ಮಾಡಿದರು.
ಈ ವೇಳೆಯಲ್ಲಿ ವಿಧಾನ ಪರಿಷತ್ತಿನ ಸರಕಾರಿ ಮುಖ್ಯ ಸಚೇತಕರು ಮಹಾಂತೇಶ ಕವಟಗಿಮಠ, ಆರ್.ಎಸ್.ಎಸ್. ಮುಖಂಡರಾದ ಅಮೃತ ಕುಲಕರ್ಣಿ, ಕ.ರಾ.ಸ ಮಹಾಮಂಡಳದ ಉಪಾಧ್ಯಕ್ಷರಾದ ಜಗದೀಶ ಕವಟಗಿಮಠ, ಪುರಸಭೆ ಅಧ್ಯಕ್ಷರಾದ ಪ್ರವೀಣ್ ಕಾಂಬಳೆ, ಉಪಾಧ್ಯಕ್ಷರಾದ ಶ್ರೀ ಸಂಜಯ ಕವಟಗಿಮಠ, ತಾಲೂಕಾ ಆರೋಗ್ಯಾಧಿಕಾರಿಗಳಾದ ವಿಠ್ಠಲ ಶಿಂಧೆ,ಸಾಯಿ ಸೇವಾ ಪರಿವಾರದ ಆಧಿನಾ ಶೆಟ್ಟಿ, ಚಿಕ್ಕೋಡಿ ಜಿಲ್ಲಾ ಮಹಿಳಾ ಮೊರ್ಚಾ ಅಧ್ಯಕ್ಷರಾದಶಾಂಭವಿ ಅಶ್ವಥಪೂರ, ಹೆಸ್ಕಾ ನಿರ್ದೇಶಕರಾದ ಮಹೇಶ ಭಾತೆ, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.