ಬೆಳಗಾವಿ: ಒಂದಡೆ ಕೊರೊನಾ ಎರಡನೇ ಅಲೆಗೆ ಜನ ಬೆಚ್ವಿ ಬಿದ್ದಿದ್ದಾರೆ.ಇನ್ನೊಂದಡೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತೆರಳಲು ವಾಹನ ಸೌಲಭ್ಯ ವಿಲ್ಲದೆ ಕಂಗಾಲಾದ ಬಡ ಜೀವಗಳು ಒಂದಡೆ ತತ್ತರಿಸಿ ಹೋದರೆ.ಎಷ್ಟೋ ಜನರು ಜೀವಗಳನ್ನು ಸಹ ಕಳೆದುಕೊಂಡಿದ್ದಾರೆ.ಇದನ್ನು ಅರಿತ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ ತಮ್ಮ ಕ್ಚೇತ್ರದ ಜನರಿಗೆ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಗಳಿಗೆ ತೆರಳಲು ಅನುಕೂಲವಾಗು ನಿಟ್ಟಿನಲ್ಲಿ ಶಾಸಕರ ಅನುದಾನದಲ್ಲಿ ಮೂರು ಆಂಬುಲೇನಸ್ ಗಳನ್ನು ತಾಲೂಕಾ ಆಸ್ಪತ್ರೆಗೆ ನೀಡಿದ್ದಾರೆ.ಇನ್ನೂ ಇಂದು ಖಾನಾಪೂರ ತಾಲೂಕಾಸ್ಪತ್ರೆ ಮುಂಭಾಗದಲ್ಲಿ ತಾವೇ ಸ್ವತ:ಅಂಬುಲೇನ್ಸ್ ಗಳಿಗೆ ಪೂಜೆ ಸಲ್ಲಿಸಿ, ತಾವೇ ಡ್ರೈವ್ ಮಾಡಿ. ತಾಲೂಕಾಸ್ಪತ್ರೆಗೆ ಆಂಬುಲೇನ್ಸ್ ಗಳನ್ನು ಹಸ್ತಾಂತರಿಸಿದ್ದಾರೆ. ಇನ್ನೂ ಇದೇ ವೇಳೆ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ ಖಾನಾಪೂರ ಮತಕ್ಷೇತ್ರ ಅರಣ್ಯ ಪ್ರದೇಶದಿಂದ ಕೊಡಿರುವುದರಿಂದ.ಸರಿಯಾದ ಸಮಯಕ್ಕೆ ಕ್ಷೇತ್ರದ ಜನ ತಮ್ಮ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಗಳಿಗೆ ತೆರಳಲು ಅನುಕೂಲವಾಗುವ ನಿಟ್ಟಿನಲ್ಲಿ ಮೂರು ಆಂಬುಲೇನ್ಸ್ ಗಳನ್ನು ತಾಲೂಕಾಸ್ಪತ್ರೆಗೆ ನೀಡಿದ್ದು.ಕ್ಷೇತ್ರದ ಜನ ಸಾಮಾನ್ಯರು ಈ ಆಂಬುಲೇನ್ಸ್ ವಾಹನಗಳ ಸೌಲಭ್ಯಗಳನ್ನು ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ಇನ್ನೂ ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು,ಕ್ಷೇತ್ರದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.