ಕೂಗು ನಿಮ್ಮದು ಧ್ವನಿ ನಮ್ಮದು

BJP ಸೀಟುಗಳನ್ನು ಕಡಿಮೆಗೊಳಿಸಬಹುದು ಅಂತ ನಾವು ತೋರಿಸಿದ್ದೇವೆ: ಅಖಿಲೇಶ್ ಯಾದವ್

ಲಕ್ನೋ: BJP ಸೀಟುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ನಾವು ತೋರಿಸಿದ್ದೇವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ರು. ಉತ್ತರ ಪ್ರದೇಶದಲ್ಲಿ BJP ಭರ್ಜರಿ ಗೆಲುವನ್ನು ಸಾಧಿಸಿ ಒಂದು ದಿನದ ಬಳಿಕ ಅಖಿಲೇಶ್ ಯಾದವ್ ಅವರು ಟ್ವೀಟ್ ಮಾಡಿದ್ದಾರೆ , ತಮ್ಮ ಸೀಟುಗಳ ಸಂಖ್ಯೆಯನ್ನು 2ರಷ್ಟು ಹೆಚ್ಚಿಸಿದಕ್ಕೆ ಹಾಗೂ ಮತ ಹಂಚಿಕೆಯಲ್ಲಿ ಒಂದೂವರೆ ಎಷ್ಟು ಹೆಚ್ಚಿಸಿದ್ದಕ್ಕೆ ಧನ್ಯವಾದವನ್ನು ತಿಳಿಸುತ್ತೇನೆ.


BJP ಯ ಸೀಟುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ನಾವು ತೋರಿಸಿದ್ದೇವೆ. ಇದು ಹೀಗೆ ಮುಂದುವರಿಯುತ್ತದೆ. ಅರ್ಧಕ್ಕಿಂತ ಹೆಚ್ಚು ಸುಳ್ಳುಗಳನ್ನು ಈಗಾಗಲೇ ಅಳಿಸಿಹಾಕಿದೆ. ಉಳಿದವುಗಳನ್ನು ಅಳಿಸಲಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಗುರುವಾರ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ BJP ೨೭೩ ಸ್ಥಾನಗಳನ್ನು ಪಡೆಯುವ ಮೂಲಕ ಗೆಲುವನ್ನು ಸಾಧಿಸಿದೆ. ಸಮಾಜವಾದಿ ಪಕ್ಷ ೧೨೫ ಸ್ಥಾನಗಳನ್ನು ಗಳಿಸುವ ಮೂಲಕ ಸೋತಿದೆ. ೨೦೧೭ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ೪೭ ಸ್ಥಾನಗಳನ್ನು ಗೆದ್ದಿತ್ತು.

error: Content is protected !!